ADVERTISEMENT

ಕಾರ್ಕಳ: ನಿವೃತ್ತ ಗ್ರಂಥಪಾಲಕ ಕೆ.ಗೋವಿಂದ ರಾವ್‌ಗೆ ನುಡಿನಮನ

​ಪ್ರಜಾವಾಣಿ ವಾರ್ತೆ
Published 8 ಮೇ 2025, 11:21 IST
Last Updated 8 ಮೇ 2025, 11:21 IST
ಕಾರ್ಕಳ ಹಿರಿಯಂಗಡಿಯ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಿವೃತ್ತ ಗ್ರಂಥಪಾಲಕ ದಿ.ಕೆ.ಗೋವಿಂದ ರಾವ್ ಅವರಿಗೆ ಸಾರ್ವಜನಿಕ ನುಡಿನಮನ ನಡೆಯಿತು
ಕಾರ್ಕಳ ಹಿರಿಯಂಗಡಿಯ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಿವೃತ್ತ ಗ್ರಂಥಪಾಲಕ ದಿ.ಕೆ.ಗೋವಿಂದ ರಾವ್ ಅವರಿಗೆ ಸಾರ್ವಜನಿಕ ನುಡಿನಮನ ನಡೆಯಿತು   

ಕಾರ್ಕಳ: ಇಲ್ಲಿನ ಗ್ರಂಥಾಲಯದ ನಿವೃತ್ತ ಗ್ರಂಥಪಾಲಕ ದಿ.ಕೆ.ಗೋವಿಂದ ರಾವ್ ಅವರಿಗೆ ಹಿರಿಯಂಗಡಿಯ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಸಾರ್ವಜನಿಕ ನುಡಿನಮನ ನಡೆಯಿತು.

‌ನುಡಿನಮನ ಸಲ್ಲಿಸಿದ ಶಿಕ್ಷಕ ರಾಜೇಂದ್ರ ಭಟ್ ಕೆ., ‘ಗೋವಿಂದ ರಾವ್ ಅವರು ಗ್ರಂಥಾಲಯಕ್ಕೆ ಬಂದ ಹಿರಿಯ, ಕಿರಿಯ ಓದುಗರನ್ನು ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡುತ್ತಿದ್ದರು. ಕಾರ್ಕಳದ ಗಾಂಧಿ ಮೈದಾನದ ವಿಸ್ತಾರವಾದ ಗ್ರಂಥಾಲಯದ ಕಟ್ಟಡ ನಿರ್ಮಾಣವಾಗಲು ಅವರು ಓದುಗರ ಮೂಲಕ ಮಾಡಿಸಿದ ಕಾರ್ಡ್ ಚಳವಳಿ ಪರೋಕ್ಷವಾಗಿ ಕಾರಣವಾಗಿತ್ತು’ ಎಂದರು.

ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ, ನಿವೃತ್ತ ಶಿಕ್ಷಕ ಬಿಪಿನಚಂದ್ರ ಪಾಲ್, ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮುಖಂಡ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿದರು.

ADVERTISEMENT

‌ಛತ್ರಪತಿ ಫೌಂಡೇಷನ್ ಅಧ್ಯಕ್ಷ ಗಿರೀಶ್ ರಾವ್ ‌ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.