ಹೆಬ್ರಿ: ಹೆಬ್ರಿ–ಕಾರ್ಕಳ ರಾಜ್ಯ ಹೆದ್ದಾರಿಯ ಕೆನರಾ ಫೀಡ್ಸ್ ಬಳಿ ಸೋಮವಾರ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದಿದ್ದು, ತೆರವುಗೊಳಿಸಲಾಯಿತು. ವಾಹನ ಸಂಚಾರ ಇದ್ದರೂ ಯಾವುದೇ ಅನಾಹುತ ಉಂಟಾಗಿಲ್ಲ.
ವರಂಗದಿಂದ ಹೆಬ್ರಿ ತನಕ ಹಲವಾರು ಕಡೆ ಸತ್ತು ಹೋಗಿರುವ, ಬೀಳುವ ಹಂತದಲ್ಲಿರುವ ಮರಗಳಿದ್ದು ಅಧಿಕಾರಿಗಳು ಸರ್ವೆ ಮಾಡಿ ತೆರವುಗೊಳಿಸುವಂತೆ ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.