ADVERTISEMENT

13 ವರ್ಷಕ್ಕೆ ಸನ್ಯಾಸ ಸ್ವೀಕಾರ ತಪ್ಪಲ್ಲ: ಪೇಜಾವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 11:39 IST
Last Updated 29 ಸೆಪ್ಟೆಂಬರ್ 2021, 11:39 IST
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ    

ಉಡುಪಿ: 13 ವರ್ಷ ತುಂಬಿದ ಬಾಲಕನಿಗೆಧಾರ್ಮಿಕತೆಯ ನೆಲೆಯಲ್ಲಿ ಸನ್ಯಾಸ ಧೀಕ್ಷೆ ನೀಡುವುದು ತಪ್ಪಲ್ಲ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಉಡುಪಿಯ ಶಿರೂರು ಮಠಕ್ಕೆ ಬಾಲಸನ್ಯಾಸಿಯ ನೇಮಕ ಸಂಬಂಧ ಹೈಕೋರ್ಟ್‌ ನೀಡಿರುವ ಆದೇಶ ಸಂಬಂಧ ಬುಧವಾರ ಮಠದಲ್ಲಿ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, 13 ವರ್ಷ ತುಂಬಿದ ಬಾಲಕನಿಗೆ ಪ್ರೌಢಿಮೆ ಇರುತ್ತದೆ. ಈ ಅವಧಿಯಲ್ಲಿ ಸನ್ಯಾಸತ್ಯ ಸ್ವೀಕರಿಸಬಹುದು ಎಂದರು.

13 ವರ್ಷಕ್ಕೆ ಸನ್ಯಾಸ ಸ್ವೀಕರಿಸಬಹುದು ಎಂಬ ಅಂಶವನ್ನು ಆಣಿಮಾಂಡವ್ಯ ಎಂಬ ಮಹರ್ಷಿ ಮಹಾಭಾರತದಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ, ಮಠಗಳಿಗೆ ಪ್ರೌಢರನ್ನು ಬಾಲಸನ್ಯಾಸಿಗಳನ್ನು ನೇಮಿಸಬಹುದು ಎಂದರು.

ADVERTISEMENT

ಸಮಿತಿ ಸಭೆ ಕರೆದು ನಿರ್ಧಾರ

ಮತ್ತೊಂದೆಡೆ, ಶಿರೂರು ಮಠಕ್ಕೆ ಬಾಲಸನ್ಯಾಸಿಯ ನೇಮಕ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಲಾತವ್ಯ ಆಚಾರ್ಯ ಪ್ರತಿಕ್ರಿಯಿಸಿ, ಶೀಘ್ರವೇ ಶಿರೂರು ಮಠದ ಭಕ್ತ ಸಮಿತಿಯ ಸಭೆ ಕರೆದು ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಸ್ವಾಗತಾರ್ಹ

ಶಿರೂರು ಮಠದ ಲಕ್ಷ್ಮೀವರ ತೀರ್ಥರ ಅಕಾಲಿಕ ನಿಧನದಿಂದ ತೆರವಾಗಿದ್ದ ಪೀಠಾಧಿಪತಿ ಸ್ಥಾನಕ್ಕೆ ಈಚೆಗೆ ದ್ವಂದ್ವ ಮಠವಾದ ಸೋದೆ ಮಠವು ವೇಧವರ್ಧನ ತೀರ್ಥರನ್ನು ನೇಮಿಸಿತ್ತು. ಬಾಲಸನ್ಯಾಸ ಹಾಗೂ ಧ್ವಂದ್ವ ಮಠಗಳ ಅಧಿಕಾರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಂಡಿರುವುದು ಸ್ವಾಗತಾರ್ಹ ಎಂದು ಸೋದೆ ಮಠದ ವಕ್ತಾರ ರತ್ನಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.