ADVERTISEMENT

ಉಡುಪಿ: ಮತ್ತೆ 29 ಮಂದಿಯಲ್ಲಿ ಕೋವಿಡ್‌

20 ಪುರುಷರು, 8 ಮಹಿಳೆಯರು, ಒಬ್ಬಳು ಬಾಲಕಿಯಲ್ಲಿ ಸೋಂಕು ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಮೇ 2020, 14:13 IST
Last Updated 28 ಮೇ 2020, 14:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಜಿಲ್ಲೆಯಲ್ಲಿ ಗುರುವಾರ 29 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. 20 ಪುರುಷರು, 8 ಮಹಿಳೆಯರ ಹಾಗೂ ಒಬ್ಬಳು ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದ್ದು, ಎಲ್ಲರಿಗೂ ಡಾ.ಟಿಎಂಎ ಪೈ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.

ಕ್ವಾರಂಟೈನ್‌ನಲ್ಲಿದ್ದವರಿಗೆ ಸೋಂಕು:ಈಚೆಗೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದು ಕ್ವಾರಂಟೈನ್‌ನಲ್ಲಿದ್ದವರಿಗೆ ಸೋಂಕು ದೃಢಪಟ್ಟಿದೆ.ಮಹಾರಾಷ್ಟ್ರದಿಂದ 26, ತೆಲಂಗಾಣದಿಂದ ಇಬ್ಬರು ಹಾಗೂ ಕೇರಳದಿಂದ ಬಂದಿದ್ದ ಒಬ್ಬರಲ್ಲಿ ಸೋಕು ಇದ್ದು, ಅವರ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.

298 ವರದಿ ನೆಗೆಟಿವ್‌:ಈಚೆಗೆ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದ ಮಾದರಿಗಳ ಪೈಕಿ ಗುರುವಾರ 298 ವರದಿಗಳು ನೆಗಟಿವ್ ಬಂದಿದ್ದು, 29 ಪಾಸಿಟಿವ್‌ ಬಂದಿವೆ. ಗುರುವಾರ 20 ಮಾದರಿಗಳನ್ನು ಲ್ಯಾಬ್‌ಗಳಿಗೆ ರವಾನಿಸಲಾಗಿದೆ.

ADVERTISEMENT

6,707 ವರದಿ ಬಾಕಿ:ಜಿಲ್ಲೆಯಿಂದ ಇದುವರೆಗೂ10,965 ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, 6,707 ವರದಿಗಳು ಬರುವುದು ಬಾಕಿ ಇದೆ. ಇದುವರೆಗೂ ಬಂದಿರುವ ವರದಿಗಳಲ್ಲಿ 4109 ನೆಗೆಟಿವ್‌ಗಳಿದ್ದು, 149 ಪಾಸಿಟಿವ್‌ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

9 ಮಂದಿ ಐಸೊಲೇಷನ್‌ ವಾರ್ಡ್‌ಗೆ ದಾಖಲು:ಕೊರೊನಾ ಸೋಂಕು ಲಕ್ಷಣಗಳು ಕಂಡುಬಂದ 7 ಪುರುಷರು ಹಾಗೂ ಇಬ್ಬರು ಮಹಿಳೆಯರು ಗುರುವಾರ ಐಸೊಲೇಷನ್‌ ವಾರ್ಡ್‌ಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, 29 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 678 ಮಂದಿ ಐಸೊಲೇಷನ್‌ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದರು.

149ಕ್ಕೇರಿಕೆ:ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 149ಕ್ಕೇರಿಕೆಯಾಗಿದೆ. ಕೋವಿಡ್‌ಗೆ ಒಬ್ಬರು ಮೃತಪಟ್ಟಿದ್ದು, ಮೂವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 145 ಸಕ್ರಿಯ ಪ್ರಕರಣಗಳು ಇವೆ.

ಸೋಂಕಿತರ ವಿವರ

ವಯಸ್ಸು–ಲಿಂಗ–ಸಂಪರ್ಕ

27–ಗಂಡು–ಮಹಾರಾಷ್ಟ್ರ

34–ಹೆಣ್ಣು–ಮಹಾರಾಷ್ಟ್ರ

28–ಗಂಡು–ಮಹಾರಾಷ್ಟ್ರ

48–ಗಂಡು–ಮಹಾರಾಷ್ಟ್ರ

32–ಗಂಡು–ಮಹಾರಾಷ್ಟ್ರ

34–ಹೆಣ್ಣು–ಮಹಾರಾಷ್ಟ್ರ

29–ಹೆಣ್ಣು–ಮಹಾರಾಷ್ಟ್ರ

39–ಗಂಡು–ಮಹಾರಾಷ್ಟ್ರ

32–ಗಂಡು–ಮಹಾರಾಷ್ಟ್ರ

34–ಗಂಡು–ಮಹಾರಾಷ್ಟ್ರ

34–ಗಂಡು–ಕೇರಳ

41–ಗಂಡು–ಮಹಾರಾಷ್ಟ್ರ

48–ಗಂಡು–ಮಹಾರಾಷ್ಟ್ರ

19–ಗಂಡು–ಮಹಾರಾಷ್ಟ್ರ

43–ಗಂಡು–ಮಹಾರಾಷ್ಟ್ರ

59–ಹೆಣ್ಣು–ಮಹಾರಾಷ್ಟ್ರ

30–ಹೆಣ್ಣು–ಮಹಾರಾಷ್ಟ್ರ

6–ಬಾಲಕಿ–ಮಹಾರಾಷ್ಟ್ರ

33–ಹೆಣ್ಣು–ತೆಲಂಗಾಣ

34–ಗಂಡು–ಮಹಾರಾಷ್ಟ್ರ

50–ಗಂಡು–ಮಹಾರಾಷ್ಟ್ರ

24–ಹೆಣ್ಣು–ತೆಲಂಗಾಣ

38–ಗಂಡು–ಮಹಾರಾಷ್ಟ್ರ

44–ಗಂಡು–ಮಹಾರಾಷ್ಟ್ರ

30–ಗಂಡು–ಮಹಾರಾಷ್ಟ್ರ

46–ಗಂಡು–ಮಹಾರಾಷ್ಟ್ರ

31–ಹೆಣ್ಣು–ಮಹಾರಾಷ್ಟ್ರ

47–ಗಂಡು–ಮಹಾರಾಷ್ಟ್ರ

42–ಗಂಡು–ಮಹಾರಾಷ್ಟ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.