ADVERTISEMENT

16ರಿಂದ ಅಖಿಲ ಭಾರತ ಅಂತರ ವಿವಿ ಸ್ಕ್ವಾಷ್‌ ಚಾಂಪಿನ್‌ಶಿಪ್‌

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 15:25 IST
Last Updated 11 ಅಕ್ಟೋಬರ್ 2019, 15:25 IST

ಉಡುಪಿ: ಮಣಿಪಾಲ ಅಕಾಡೆಮಿ ಆಫ್‌ ಹೈಯರ್ ಎಜುಕೇಷನ್‌ ಸಂಸ್ಥೆಯಿಂದ ಅ.16ರಿಂದ 18ರವರೆಗೆ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಸ್ಕ್ವಾಷ್‌ ರಾಕೆಟ್‌ ಚಾಂಪಿಯನ್‌ಶಿಪ್‌ ಹಮ್ಮಿಕೊಳ್ಳಲಾಗಿದೆ ಎಂದು ಮಾಹೆ ಸಹ ಕುಲಪತಿ ಪ್ರೊ.ಎಚ್‌.ಎಸ್‌.ಬಲ್ಲಾಳ್ ತಿಳಿಸಿದರು.

ಶುಕ್ರವಾರ ಮಾಹೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೇಶದ ಪ್ರಮುಖ 30 ವಿಶ್ವವಿದ್ಯಾಲಯಗಳಿಂದ 200 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಮಣಿಪಾಲದ ಮರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಮಾಹೆ ವಿವಿ ಯಿಂದ 6 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ದೆಹಲಿಯಲ್ಲಿ ನಡೆದ ಸ್ಕ್ವಾಷ್‌ ಚಾಂಪಿಯನ್‌ಶಿಪ್‌ನಲ್ಲಿ ಮದ್ರಾಸ್‌ ವಿವಿ ಮೊದಲ ಸ್ಥಾನ ಪಡೆದರೆ, ಮಾಹೆ ರನ್ನರ್ ಅಪ್‌ ಪ್ರಶಸ್ತಿ ಪಡೆದುಕೊಂಡಿತ್ತು. ದೆಹಲಿ ವಿವಿ, ಪಂಡಿತ್‌ ರವಿಶಂಕರ್ ಶುಕ್ಲ ವಿವಿ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದಿತ್ತು. ಈ ಬಾರಿ ಮಾಹೆ ಪ್ರಥಮ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದರು.

ADVERTISEMENT

16ರಂದು ಬೆಳಿಗ್ಗೆ 10ಕ್ಕೆ ಚಾಂಪಿಯನ್‌ಶಿಪ್‌ ಅನ್ನು ಜಿಲ್ಲಾಧಿಕಾರಿ ಜಿ.ಜಗದೀಶ್‌ ಉದ್ಘಾಟಿಸಲಿದ್ದಾರೆ. ಅಂತರರಾಷ್ಟ್ರೀಯ ಸ್ಕ್ವಾಷ್‌ ಆಟಗಾರ ರವಿ ದೀಕ್ಷಿತ್ ಉಪಸ್ಥಿತರಿರಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಹೆಯ ಕ್ರೀಡಾ ಅಧಿಕಾರಿ ವಿನೋದ್ ನಾಯಕ್‌, ಶೋಭಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.