ADVERTISEMENT

ಹೆಬ್ರಿ | ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಿ: ಆನಂದ ಸಾಲಿಗ್ರಾಮ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 7:49 IST
Last Updated 3 ಮಾರ್ಚ್ 2026, 7:49 IST
ಹೆಬ್ರಿ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು
ಹೆಬ್ರಿ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು   

ಹೆಬ್ರಿ : ‘ಕನ್ನಡ ಕನ್ನಡ ಎಂದು ಕೂಗಿದರೆ ಸಾಲದು. ಕನ್ನಡ ಶಾಲೆಗೆ ಮಕ್ಕಳನ್ನು, ಮೊಮ್ಮಕ್ಕಳನ್ನು ಸೇರಿಸಬೇಕು. ಆ ಮೂಲಕ ಕನ್ನಡ ಭಾಷೆ ಉಳಿಸಲು ಕೈ ಜೋಡಿಸಿ, ಕನ್ನಡ ನಾಡಿನ ಆಶಯಗಳನ್ನು ಈಡೇರಿಸಬೇಕು’ ಎಂದು ಸಾಹಿತಿ, ಯಕ್ಷಗಾನ ಪ್ರಸಂಗಕರ್ತ ಪಿ.ವಿ. ಆನಂದ ಸಾಲಿಗ್ರಾಮ ಹೇಳಿದರು.

ಅರಸಮ್ಮಕಾನು ಶೇಡಿಮನೆಯ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ನಡೆದ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಕನ್ನಡ ಪದಗಳ ಅರ್ಥ ಸರಿಯಾಗಿ ತಿಳಿದು ಮಾತಾಡಬೇಕು. ನಮ್ಮ ಮಾತುಗಳಲ್ಲಿ ಅದೆಷ್ಟೊ ಪದಗಳು ತಪ್ಪು ಬಳಕೆ ಆಗಿಬಿಟ್ಟಿವೆ. ಶಿಕ್ಷಕರು ಶಾಲಾ ಹಂತದಲ್ಲಿ ಇದನ್ನು ಸರಿಪಡಿಸಬೇಕು ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಮುದ್ದೂರು ಶ್ರೀನಿವಾಸ ಭಂಡಾರಿ ಅವರು ಸಮ್ಮೇಳನಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಜಿಲ್ಲಾಧ್ಯಕ್ಷರ ನುಡಿ ಸಲ್ಲಿಸಿದರು.

ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಉಡುಪಿ ಗಾಂಧಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಹರೀಶ್ಚಂದ್ರ, ಉಧ್ಯಮಿ ಬೆಳ್ವೆ ಗಣೇಶ ಕಿಣಿ, ಮಡಾಮಕ್ಕಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಿತೇಶ್‌ ಪುತ್ರನ್‌, ಗ್ರಾಮ ಲೆಕ್ಕಾಧಿಕಾರಿ ರವಿವರ್ಮ, ಗಣೇಶ ಕುಮಾರ್‌ ಶೆಟ್ಟಿ ಮೊಳಹಳ್ಳಿ, ಮೋಹನದಾಸ ಹೆಗ್ಡೆ, ಪ್ರಮುರಾಧ ಬಿ. ಚಂದ್ರಶೇಖರ ಶೆಟ್ಟಿ, ಡಾ.ಅಭಿಷೇಕ ಬಾಯರಿ, ಸದಾನಂದ ಪೂಜಾರಿ, ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಪುಂಡಲೀಕ ಮರಾಠೆ, ಗೋಳಿಯಂಗಡಿ ವಿಜಯ ಕುಮಾರ್‌ ಶೆಟ್ಟಿ, ಭಾಸ್ಕರ ಜೋಯಿಸ್‌, ವಾದಿರಾಜ ಶೆಟ್ಟಿ, ಹರ್ಷ ಶೆಟ್ಟಿ, ಮುಖ್ಯಶಿಕ್ಷಕಿ ಮೀನಾಕ್ಷಿ ರಾವ್‌, ನಾಗರಾಜ ಬಾಯರಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಶಾಧಿಕಾರಿ ಮನೋಹರ್‌ ಪಿ, ಎಚ್.‌ ಜನಾರ್ದನ್‌, ತಾಲ್ಲೂಕು ಘಟಕದ ಪದಾಧಿಕಾರಿಗಳು, ಸಮ್ಮೇಳನದ ಸ್ವಾಗತ ಸಮಿತಿ, ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು. ರಾಧಾಕೃಷ್ಣ ಕ್ರಮಧಾರಿ ಸ್ವಾಗತಿಸಿದರು. ಮಂಜುನಾಥ ಕೆ. ಶಿವಪುರ ವಂದಿಸಿದರು. ಗಣೇಶ ಅರಸಮ್ಮಕಾನು, ನವೀನ್‌ ಶೆಟ್ಟಿ ಮಡಾಮಕ್ಕಿ ನಿರೂಪಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳ ಸಾಧಕರಾದ ಮಡಾಮಕ್ಕಿಯ ಉದಯ ಕುಮಾರ ಶೆಟ್ಟಿ ಬಾಗಳಮಕ್ಕಿ (ಸಮಾಜಸೇವೆ) ಕುಚ್ಚೂರಿನ ಭೂತುಗುಂಡಿ ಕರುಣಾಕರ ಶೆಟ್ಟಿ (ಸಹಕಾರಿ) ಬೆಳ್ವೆಯ ನಾಗರತ್ನ ಜಿ. ಹೆಬ್ಬಾರ್‌ ಮತ್ತು ಹೆಬ್ರಿಯ ಡಾ.ಸುಲತಾ ಹೆಬ್ರಿ (ಸಾಹಿತ್ಯ) ಚಾರದ ಶ್ರತಿ ಚಂದ್ರಶೇಖರ್‌ (ಚಲನಚಿತ್ರ) ಶೈಲಜಾ ಶಿವಪುರ (ಸಂಗೀತ) ವರಂಗದ ವೇದಮೂರ್ತಿ ರಾಘವೇಂದ್ರ ಭಟ್‌ (ಧಾರ್ಮಿಕ0 ನಾಡ್ಪಾಲು ಸುದೀಪ್‌ ಶೆಟ್ಟಿ ಮೇಗದ್ದೆ (ಯಕ್ಷಗಾನ) ಮುದ್ರಾಡಿಯ ಬಾಲಚಂದ್ರ (ಆರೋಗ್ಯ ಕ್ಷೇತ್ರ) ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನಾಧ್ಯಕ್ಷ ಶೇಡಿಮನೆ ಗೋಪಾಲ ಶೆಟ್ಟಿ ರಜನಿ ಶೆಟ್ಟಿ ದಂಪತಿ ಸ್ವಾಗತ ಸಮಿತಿ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಕಾರ್ಯಾಧ್ಯಕ್ಷ ಶಂಕರ ಪೂಜಾರಿ ಸಂಚಾಲಕ ರಾಧಾಕೃಷ್ಣ ಕ್ರಮಧಾರಿ ಪದಾಧಿಕಾರಿಗಳು ದಾನಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಎಳ್ಳಾರೆ ಸದಾಶಿವ ಪ್ರಭು ದಂಪತಿಯನ್ನು ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.