ADVERTISEMENT

ಉಡುಪಿ | ಹಲ್ಲೆ: ಗ್ರಾ.ಪಂ. ಸದಸ್ಯರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 5:23 IST
Last Updated 14 ಜುಲೈ 2024, 5:23 IST

ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೆಲವು ಗ್ರಾ.ಪಂ. ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ. ಸದಸ್ಯ ರವಿರಾಜ್‌ ಎಂಬುವವರು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾಮಾನ್ಯ ಸಭೆಗೆ ಚರ್ಚೆ ನಡೆಯುವ ಮೊದಲೇ ಬಂದಿದ್ದ ಸದಸ್ಯರಾದ ವಿನೋದ್‌, ಮಾಲಿನಿ, ರೇಖಾ, ಪ್ರಶಾಂತ್‌, ನಿರ್ಮಲಾ, ಸತೀಶ್‌, ಗೀತಾ, ಅರುಣ್‌ ಮತ್ತು ಪ್ರದೀಪ್‌ ಅವರು, ಸಭೆ ನಿಲ್ಲಿಸುವಂತೆ ಹೇಳಿ, ತಮ್ಮ ಮೇಲೆ ಹಲ್ಲೆ ನಡೆಸಿ ನಿಂದಿಸಿರುವುದಾಗಿ ರವಿರಾಜ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಿಂದ ಕಳವು

ADVERTISEMENT

ಉಡುಪಿ: ಮನೆಯಿಂದ ಬೆಲೆಬಾಳುವ ಪೀಠೋಪಕರಣಗಳು ಕಳ್ಳತನವಾಗಿರುವ ಕುರಿತು ಬೈಲಕೆರೆಯ ನವ್ಯ ಎಂಬುವವರು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ವಸಂತ್‌ ಎಂಬುವವರು ತಡರಾತ್ರಿ ತಮ್ಮ ಮನೆಯ ಬೀಗ ಮುರಿದು ಒಳ ಪ್ರವೇಶಿಸಿ, ಪೀಠೋಪಕರಣಗಳನ್ನು ಕಳವು ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮನೆಯಿಂದ ಚಿನ್ನ ಕಳವು

ಉಡುಪಿ: ಮನೆಯಿಂದ ಚಿನ್ನ ಕಳ್ಳತನವಾಗಿರುವ ಕುರಿತು ಕಕ್ಕುಂಜೆ ಗ್ರಾಮದ ಅದಯ್ಯ ಹಿರೇಮಠ ಅವರು ಮಣಿಪಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ತಮ್ಮ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ 16 ಗ್ರಾಂ. ಚಿನ್ನ ಮತ್ತು ದಾಖಲೆಗಳನ್ನು ಕದ್ದಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.