ADVERTISEMENT

ಹೆಬ್ರಿ: ಅಷ್ಟಮಿ ದಿನ ವೇಷ ಹಾಕಿ ಬಾಲಕಿ ಚಿಕಿತ್ಸೆಗೆ ₹10.50 ಲಕ್ಷ ಸಹಾಯ

ಥಲಸ್ಸೆಮಿಯಾಯಿಂದ ಬಳಲುತ್ತಿರುವ ಬಾಲಕಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 5:51 IST
Last Updated 29 ಆಗಸ್ಟ್ 2022, 5:51 IST
ವೇಷ ಧರಿಸಿ ಸಂಗ್ರಸಿಹಿ ₹10.51 ಲಕ್ಷ ಹಣವನ್ನು ಬಾಲಕಿಯ ಹೆತ್ತವರಿಗೆ ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ ಮೂಲಕ ಹಸ್ತಾಂತರಿಸಲಾಯಿತು
ವೇಷ ಧರಿಸಿ ಸಂಗ್ರಸಿಹಿ ₹10.51 ಲಕ್ಷ ಹಣವನ್ನು ಬಾಲಕಿಯ ಹೆತ್ತವರಿಗೆ ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ ಮೂಲಕ ಹಸ್ತಾಂತರಿಸಲಾಯಿತು   

ಹೆಬ್ರಿ: ಥಲಸ್ಸೆಮಿಯಾ ಮೇಜರ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಹೆಬ್ರಿ ತಾಲ್ಲೂಕು ಕುಚ್ಚೂರು ಗ್ರಾಮದ ಸಾನ್ವಿ ನಾಯ್ಕ್ ಚಿಕಿತ್ಸೆಗೆ ಸ್ಪಂದಿಸುವ ಉದ್ದೇಶದೊಂದಿಗೆ ಕಾಪುವಿನ ಯೂಟ್ಯೂಬರ್ ಸಚಿನ್ ಶೆಟ್ಟಿ ನೇತೃತ್ವದ ಶಟರ್ ಬಾಕ್ಸ್ ಫಿಲಮ್ಸ್ ತಂಡ ಅಷ್ಟಮಿಯ ದಿನ ವೇಷ ಧರಿಸಿ ಸಂಗ್ರಹಿಸಿದ ₹10.51ಲಕ್ಷ ಸಹಾಯ ಧನವನ್ನು ಬಾಲಕಿಯ ಹೆತ್ತವರಿಗೆ ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ ಮೂಲಕ ಹಸ್ತಾಂತರಿಸಲಾಯಿತು.

ಚೇತನ್ ಶೆಟ್ಟಿ, ನಿತೇಶ್ ಪೂಜಾರಿ, ಶ್ರೇಯಸ್, ಸುದೀಪ್ ಮೊದಲಾದವರು ರಕ್ಕಸ ವೇಷ ಧರಿಸಿ ಅಷ್ಟಮಿಯಂದು ಹಣ ಸಂಗ್ರಹಿಸಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದ ಮೂಲಕವು ದೇಣಿಗೆ ನೀಡುವಂತೆ ಮನವಿ ಮಾಡಿದ್ದರು. ವೇಷ ಧರಿಸಿ ₹1.50 ಲಕ್ಷ ಸಂಗ್ರಹಿಸಿದ್ದು ಸಾಮಾಜಿಕ ಜಾಲತಾಣದ ಮೂಲಕ ಸುಮಾರು ₹9 ಲಕ್ಷ ಸಂಗ್ರಹವಾಗಿತ್ತು. ಸಾನ್ವಿಯ ಚಿಕಿತ್ಸೆಗೆ ಸುಮಾರು ₹40 ಲಕ್ಷದವರೆಗೆ ಬೇಕಿದ್ದು ಸಮಾಜದ ಹಲವಾರು ಸಂಘ ಸಂಸ್ಥೆಗಳು ತಮ್ಮ ಕೈಲಾದಷ್ಟು ಹಣ ನೀಡಿದ್ದಾರೆ. ಚಿಕಿತ್ಸೆಗಾಗಿ ಇನ್ನೂ ₹15 ರಿಂದ ₹20 ಲಕ್ಷ ಹಣ ಸಂಗ್ರಹವಾಗಬೇಕಾಗಿದೆ.

ಧನ ಸಹಾಯ ವಿತರಣೆ ವೇಳೆ ಸಚಿನ್ ಶೆಟ್ಟಿ, ಚೇತನ್, ಸುದೀಪ್, ನಿತೇಶ್, ಅರ್ಜುನ್ ಪೈ, ಚೇತನ್ ಬೆಳ್ಳಿ ರಾಯ, ಸಂದೇಶ ಕಟಪಾಡಿ, ದೀಪಕ್ ರಾಜ್ ಶೆಟ್ಟಿ, ವಿಲ್ಮಾ ಸಚಿನ್, ಚಂದ್ರ ನಾಯ್ಕ ಹಾಗೂ ಮಾಲತಿ ಇದ್ದರು.

ADVERTISEMENT

ಸಹಾಯದ ನಿರೀಕ್ಷೆ: ‘ಚಿಕಿತ್ಸೆಗೆ ₹40 ಲಕ್ಷ ಬೇಕಾಗಿದ್ದು ಅರ್ಧದಷ್ಟು ಹಣ ಸಂಗ್ರಹವಾಗಿದೆ. ದಯಮಾಡಿ ಸಹಕಾರ ನೀಡಿ ಮಗಳ ಚಿಕಿತ್ಸೆಗೆ ನೆರವಾಗಿ ಎಂದು ಸಾನ್ವಿ ತಾಯಿ ಮಾಲತಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.