ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ಸಂದರ್ಭ ಉಡುಪಿಯ ಕೃಷ್ಣಮಠದಲ್ಲಿ ದೇವರಿಗೆ ಮಹಾ ಪೂಜೆ ನೆರವೇರಿತು.
ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ದೇವರಿಗೆ ಮಂಗಳಾರತಿ ಮಾಡಿ ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರುವಂತೆ ಪ್ರಾರ್ಥಿಸಿದರು.
ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಕೃಷ್ಣನಿಗೆ ವಿಶೇಷವಾಗಿ 'ಪಟ್ಟಾಭಿರಾಮ' ಅಲಂಕಾರ ಮಾಡಿದ್ದರು.
ಪಲಿಮಾರು ಮಠದಲ್ಲಿ ಭಕ್ತರು ಭಜನೆ ಮಾಡಿದರು.
ದೇವರಿಗೆ ಲಕ್ಷ ತುಳಸಿ ಸಮರ್ಪಣೆ
ಉಡುಪಿ: ಬ್ರಹ್ಮಾವರ ಸಮೀಪದ ನೀಲಾವರ ಗೋಶಾಲೆಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ದೇವರಿಗೆ ಲಕ್ಷ ತುಳಸಿ ಸಮರ್ಪಿಸಿದರು.
ಬಳಿಕ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸಿದರು.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗೆ ಅಧಿಕೃತ ಆಹ್ವಾನ ಬಂದಿತ್ತಾದರೂ, ಚಾತುರ್ಮಾಸ್ಯ ವ್ರತಾಚರಣೆ ನಿರತರಾಗಿದ್ದರಿಂದ ಶ್ರೀಗಳು ಭಾಗವಹಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.