ADVERTISEMENT

ತ್ರಿವರ್ಣ ರಂಗಿನಲ್ಲಿ ಮಿಂದ ಉಡುಪಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 16:07 IST
Last Updated 13 ಆಗಸ್ಟ್ 2022, 16:07 IST
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಉಡುಪಿ ನಗರಸಭೆ ಕಚೇರಿಯನ್ನು ಕೇಸರಿ ಬಿಳಿ ಹಸಿರು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಉಡುಪಿ ನಗರಸಭೆ ಕಚೇರಿಯನ್ನು ಕೇಸರಿ ಬಿಳಿ ಹಸಿರು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.   

ಉಡುಪಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಉಡುಪಿ ನಗರ ತ್ರಿವರ್ಣ ರಂಗಿನಲ್ಲಿ ಕಂಗೊಳಿಸುತ್ತಿದೆ. ಮನೆಗಳ ಮೇಲೆ, ಅಂಗಡಿ, ಮುಂಗಟ್ಟುಗಳ ಮೇಲೆ ರಾಷ್ಟ್ರಧ್ವಜ ರಾರಾಜಿಸುತ್ತಿದೆ.

ಉಡುಪಿ ನಗರಸಭೆ ಕಚೇರಿಯನ್ನು ಕೇಸರಿ ಬಿಳಿ ಹಸಿರು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹಾಗೆಯೇ ಕೃಷ್ಣಮಠದ ಕನಕ ಗೋಪುರದ ಮೇಲೂ ತ್ರಿವರ್ಣ ರಂಗು ತುಂಬಿಕೊಂಡಿತ್ತು. ವಿಕ್ಟೋರಿಯಾ ಗೋಲ್ಡನ್ ಜ್ಯುಬಿಲಿ ಯುನಿಯನ್ ಕ್ಲಬ್‌ ಕಟ್ಟಡಕ್ಕೂ ತ್ರಿವರ್ಣ ದೀಪಾಲಂಕಾರ ಮಾಡಲಾಗಿತ್ತು.

ಸಂಘ ಸಂಸ್ಥೆಗಳು ಸಾರ್ವಜನಿಕರಿಗೆ ಧ್ವಜ ವಿತರಣೆ ಮಾಡಿದವು. ಜಿಲ್ಲಾಡಳಿತದಿಂದಲೂ ಅಲ್ಲಲ್ಲಿ ಧ್ವಜಗಳ ವಿತರಣೆ ನಡೆಯಿತು. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಧ್ವಜಗಳನ್ನು ಖರೀದಿಸಿ ಮನೆಗಳ ಮೇಲೆ ಹಾರಿಸಿ ದೇಶಪ್ರೇಮ ಮೆರೆದರು. ನಗರದ ಪ್ರಮುಖ ಅಪಾರ್ಟ್‌ಮೆಂಟ್‌ಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.