ಬೈಂದೂರು: ತಾಲ್ಲೂಕಿನ ಮಸೀದಿಗಳಲ್ಲಿ ಶನಿವಾರ ಬಕ್ರೀದ್ ಹಬ್ಬ ಸಡಗರದಿಂದ ನಡೆಯಿತು.
ಮುಸ್ಲಿಂ ಬಾಂಧವರು ಬೆಳಿಗ್ಗೆ ಮಸೀದಿಗೆ ತೆರಳಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಮಾಜ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಬೈಂದೂರು ಜಾಮಿಯ ಮಸೀದಿಯಲ್ಲಿ ಮಸೀದಿಯ ಇಮಾಮ್ ತೈಯಬ್ ಹುಸೇನ್ ನೂರಿಯವರು ಈದ್ ಹಬ್ಬದ ಕುತ್‘ಬಾ, ನಮಾಜ್ ಹಾಗೂ ದುಆ ನಿರ್ವಹಿಸಿದ್ದರು.
ತಾಬಿಸ್ರಝಾಬೈಂದೂರುಸಲಾತುಸಲಾಂಗೆ ನೇತೃತ್ವ ನೀಡಿದರು. ನಮಾಜಿಗಿಂತ ಮುಂಚಿತವಾಗಿ ಬಕ್ರಿದ್ ಹಬ್ಬದ ವಿಶೇಷತೆಯ ಬಗ್ಗೆ ತಿಳಿಸಲಾಯಿತು.
ಮುಸ್ಲಿಂ ಮುಖಂಡರಾದ ನಾಗೂರ್ನಾಸಿರ್ ಅಹಮದ್, ಶೇಕ್ಜಾಫರ್ಸಾಧಿಕ್, ಮಾವಡ್ ಅಕ್ರಮ್, ಬೈಂದೂರು ಕಾಂಗ್ರೆಸ್ ಅಲ್ಪಸಂಖ್ಯಾತಮುಖಂಡಶಬ್ಬೀರ್ಬೈಂದೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.