ADVERTISEMENT

ಕುಂದಾಪುರ: ಬಕ್ರೀದ್ ಹಬ್ಬದ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 16:20 IST
Last Updated 7 ಜೂನ್ 2025, 16:20 IST
ಕುಂದಾಪುರದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಕುಂದಾಪುರದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು   

ಕುಂದಾಪುರ: ಬಕ್ರೀದ್ ಹಬ್ಬದ ಸಂಭ್ರಮಾಚರಣೆ ಪ್ರಯುಕ್ತ ಇಲ್ಲಿನ ಜಾಮೀಯಾ ಮಸೀದಿಯಲ್ಲಿ ಮುಸ್ಲಿಂಮರು ಈದ್ ವಿಶೇಷ ಪ್ರಾರ್ಥನೆ, ಮೆರವಣಿಗೆ ಹಾಗೂ ಸಾಮೂಹಿಕ ಕುರಾನ್ ಪ್ರಾರ್ಥನೆ ಜರುಗಿತು.

ಕಂಡ್ಲೂರು, ಬಸ್ರೂರು, ಕೋಟೇಶ್ವರ, ಕೋಡಿ, ಹಂಗಳೂರು, ಹೆಮ್ಮಾಡಿ, ಮಾವಿನಕಟ್ಟೆ, ಹೈಕಾಡಿ, ಗಂಗೊಳ್ಳಿ ಸೇರಿದಂತೆ ತಾಲ್ಲೂಕಿನಾದ್ಯಂತ ಮುಸ್ಲಿಂಮರು ಈದುಲ್ ಅಝಾ (ಬಕ್ರೀದ್ ಹಬ್ಬ)ವನ್ನು ಶನಿವಾರ ಸಂಭ್ರಮ ಸಡಗರದಿಂದ ಆಚರಿಸಿದರು.

ಬೆಳಿಗ್ಗೆ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಮಾಜ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಕುಂದಾಪುರ ನಗರದಲ್ಲಿ ಮೆರವಣಿಗೆ ನಡೆಸಲಾಯಿತು. ಜಾಮೀಯಾ ಮಸೀದಿಯ ಖತೀಬ ಶಾಹಿದ್ ಹುಸೇನ್, ಅಧ್ಯಕ್ಷ ವಸೀಮ್ ಬಾಷಾ ಸಾಹೇಬ್, ಪುರಸಭೆ ಸದಸ್ಯ ಅಬು ಮಹಮ್ಮದ್, ತಬ್ರೇಜ್ ಜುಕಾಕೋ‌ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.