ADVERTISEMENT

ಬೆಂಗಳೂರು ಮಹಿಳೆಯ ಶವ ಕೊಲ್ಲೂರಿನಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 5:25 IST
Last Updated 31 ಆಗಸ್ಟ್ 2025, 5:25 IST
ವಸುಧಾ ಚಕ್ರವರ್ತಿ
ವಸುಧಾ ಚಕ್ರವರ್ತಿ   

ಕುಂದಾಪುರ: ಕೊಲ್ಲೂರಿನ ವಸತಿಗೃಹವೊಂದರ ಬಳಿ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಬೆಂಗಳೂರಿನ ವಸುಧಾ ಚಕ್ರವರ್ತಿ (45) ಅವರ ಮೃತದೇಹ ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಶನಿವಾರ ಪತ್ತೆಯಾಗಿದೆ.

ಬೆಂಗಳೂರಿನ ತ್ಯಾಗರಾಜ ನಗರದ ನಿವಾಸಿ ವಿಮಲಾ ಅವರ ಪುತ್ರಿ ವಸುಧಾ ಆ.27ರಂದು ಕಾರಿನಲ್ಲಿ ಕೊಲ್ಲೂರಿಗೆ ಬಂದು ನಾಪತ್ತೆಯಾಗಿದ್ದರು. ವಸತಿ ಗೃಹದ ಬಳಿ ಅವರ ಕಾರು ಪತ್ತೆಯಾಗಿತ್ತು. ಮಗಳ ಮೊಬೈಲ್‌‌ ಫೋನ್‌ಗೆ ಕರೆ ಮಾಡಿದಾಗ ಸಿಗದೇ ಇದ್ದ ಕಾರಣ ಅವರ ತಾಯಿ ಆ.29 ರಂದು ಕೊಲ್ಲೂರಿಗೆ ಬಂದು ದೇವಸ್ಥಾನದ ಸಿಬ್ಬಂದಿಗೆ ವಿಚಾರ ತಿಳಿಸಿದ್ದರು.

ಕೊಲ್ಲೂರು ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಿಸಿಕೊಂಡು ಸೌಪರ್ಣಿಕಾ ನದಿ ಪರಿಸರದಲ್ಲಿ ಹುಡುಕಾಡಲಾಗಿತ್ತು. ಪೊಲೀಸರು, ಬೈಂದೂರು ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯರು ಹಾಗೂ ಈಶ್ವರ್ ಮಲ್ಪೆ ಅವರ ತಂಡ ಹುಡುಕಾಡಿತ್ತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.