
ಕೋಟ(ಬ್ರಹ್ಮಾವರ): ಇಲ್ಲಿನ ಕೋಟ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಳಿಯ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಸದ್ಭಾವನಾ ಕಾರ್ಯಕ್ರಮದಲ್ಲಿ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಆನ್‌ಲೈನ್ ಮೂಲಕ ಶುಭ ಹಾರೈಸಿದರು. ಮುಖಂಡ ಕೆ.ಜಯಪ್ರಕಾಶ್ ಹೆಗ್ಡೆ ಅವರು ರಥಶಿಲ್ಪಿ ಕೋಟೇಶ್ವರ ರಾಜಗೋಪಾಲ ಆಚಾರ್ಯ ಅವರಿಗೆ ಪಂಚವರ್ಣ ವಿಶೇಷ ಪುರಸ್ಕಾರವನ್ನು ಮತ್ತು ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರುಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಅಥ್ಲೀಟ್ ಅಶ್ವಿನಿ ಅರಳಿ, ಕೋಟ ಸುರೇಶ ಬಂಗೇರ, ನಿರೂಪಕಿ ಕೋಟ ರೇವತಿ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಬನ್ನಾಡಿ ಪದ್ದು ಆಚಾರ್ ಸ್ಮರಣಾರ್ಥ ಅಶಕ್ತ, ಆರೋಗ್ಯ ನಿಧಿ ವಿತರಣೆ, ಸಂತೋಷ ಕುಮಾರ್ ಕೋಟ ಅವರ ನೆನಪಿನಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಿಗೆ ಶೈಕ್ಷಣಿದತ್ತಿನಿಧಿ, ವಿದ್ಯಾರ್ಥಿಗಳಿಗೆ ಪುನೀತ್ ರಾಜ್ ಕುಮಾರ್ ವಿದ್ಯಾನಿಧಿ ವಿತರಿಸಲಾಯಿತು. ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ಆರೋಗ್ಯ ಪರಿಕರ, ಕೋಟದ ಸೇವಾಸಂಗಮ ಶಿಶುಮಂದಿರಕ್ಕೆ ಸಮವಸ್ತ್ರ ವಿತರಿಸಲಾಯಿತು.
ಬೆಂಗಳೂರು ಕ್ಯಾಪ್ಸ್ ಫೌಂಡೇಷನ್ ವತಿಯಿಂದ ಪ್ಲಾಸ್ಟಿಕ್ ಮುಕ್ತ ಸಮಾಜ ಶೀರ್ಷಿಕೆಯಡಿ ಒಂದು ಸಾವಿರ ಬಟ್ಟೆ ಕೈಚೀಲಗಳನ್ನು ಫೌಂಡೇಷನ್ ಮುಖ್ಯಸ್ಥ ಚಂದ್ರಶೇಖರ ಶೆಟ್ಟಿ ಕೋಟ ಸಿಎ ಬ್ಯಾಂಕ್ ಸಿಇಓ ಶರತ್ ಕುಮಾರ್ ಶೆಟ್ಟಿ ಹಸ್ತಾಂತರಿಸಿದರು. ಕೋಟ ಮಣೂರಿನ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಉದ್ಘಾಟಿಸಿದರು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪ್ರಾಂಶುಪಾಲ ಡಾ.ಕೃಷ್ಣ ಕಾಂಚನ್, ಒಎನ್‌ಜಿಸಿ ನಿವೃತ್ತ ಪ್ರಬಂಧಕ ಬನ್ನಾಡಿ ನಾರಾಯಣ ಆಚಾರ್, ಉದ್ಯಮಿಗಳಾದ ದಿನೇಶ ಹೆಗ್ಡೆ ಮೊಳಹಳ್ಳಿ, ಶಂಕರ ಹೆಗ್ಡೆ, ಸಮಾಜ ಸೇವಕ ಬಡಾಮನೆ ರತ್ನಾಕರ ಶೆಟ್ಟಿ, ಕುಂದಾಪುರ ಮಾತಾ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಕಾಶ ಸಿ ತೋಳಾರ್, ಯಡಾಡಿ ಮತ್ಯಾಡಿ ಸುಜ್ಞಾನ ಎಜುಕೇಷನ್ ಟ್ರಸ್ಟ್ ಮುಖ್ಯಸ್ಥ ರಮೇಶ ಶೆಟ್ಟಿ, ಗುತ್ತಿಗೆದಾರ ಗುಂಡ್ಮಿ ಅವಿನಾಶ ಶೆಟ್ಟಿ ಬೆಂಗಳೂರು, ಮಣಿಪಾಲದ ಸೃಷ್ಠಿ ಇಂಜಿನಿಯರ್ ನ ಮುಖ್ಯಸ್ಥ ಜಯರಾಜ ವಿ ಶೆಟ್ಟಿ, ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಸಾಂಸ್ಕೃತಿಕ ಚಿಂತಕ ಋಶಿರಾಜ್ ಸಾಸ್ತಾನ, ಸಾಮಾಜಿಕ ಕಾರ್ಯಕರ್ತ ಕೆ.ದಿನೇಶ ಗಾಣಿಗ, ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ ಎಚ್ ಕುಂದರ್, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ ಇದ್ದರು.
ರವೀಂದ್ರ ಕೋಟ ಸ್ವಾಗತಿಸಿದರು. ರೇವತಿ ಶೆಟ್ಟಿ ನಿರೂಪಿಸಿದರು. ಅಜಿತ ಆಚಾರ್ ವಂದಿಸಿದರು.
Highlights - ಉಡುಪಿ ದಕ್ಷಿಣಕನ್ನಡ ಜಿಲ್ಲೆ ಪ್ರಕೃತಿಯ ತವರೂರು ಶಿಕ್ಷಿತರು, ಪ್ರಜ್ಞಾವಂತರ ನಾಡಲ್ಲೇ ಹೆಚ್ಚು ಪ್ರಕೃತಿಯ ನಾಶ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
Quote - ಮಾದಕ ವಸ್ತುಗಳನ್ನು ಶಾಲಾ ಪರಿಸರದಿಂದ ನಿಲ್ಲಿಸುವ ವ್ಯವಸ್ಥೆ ತ್ಯಾಜ್ಯ ವಿಲೇವಾರಿ ನಮ್ಮ ಪರಿಸರವನ್ನು ರಕ್ಷಣೆ ಮಾಡುವ ಕೆಲಸ ಮಾಡುವ ಬಗ್ಗೆ ಎಲ್ಲರೂ ಚಿಂತಿಸಬೇಕಾಗಿದೆ. ಕೆ.ಜಯಪ್ರಕಾಶ ಹೆಗ್ಡೆ ಮಾಜಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.