
ಪ್ರಜಾವಾಣಿ ವಾರ್ತೆ
ಮದುವೆ
ಬ್ರಹ್ಮಾವರ (ಉಡುಪಿ): ತಾಲ್ಲೂಕಿನ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 24ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ‘ಮಾಂಗಲ್ಯ ಭಾಗ್ಯ’ ಏಪ್ರಿಲ್ 8ರಂದು ನಡೆಯಲಿದೆ.
ವಧುವಿಗೆ ಕರಿಮಣಿ ಸರ, ಧಾರೆ ಸೀರೆ ಮತ್ತು ವರನಿಗೆ ಕುರ್ತಾ ಪೈಜಾಮ, ಹೂವಿನ ಹಾರ ದೇವಸ್ಥಾನದ ವತಿಯಿಂದ ನೀಡಲಾಗುವುದು. ಜೋಡಿಗಳ ವಿವಾಹ ನೋಂದಣಿಗೆ ಮದುವೆ ದಿನವೇ ಕ್ರಮವಹಿಸಲಾಗುವುದು. ವಧು–ವರರು ರಾಜ್ಯ ಸರ್ಕಾರದ ಪ್ರೋತ್ಸಾಹಧನ ಪಡೆಯಲು ಅರ್ಹರಾಗಿರುತ್ತಾರೆ.
ಆಸಕ್ತರು ದೇವಸ್ಥಾನದ ಕಚೇರಿಯಲ್ಲಿ ಮಾರ್ಚ್ 10ರೊಳಗೆ ಹೆಸರು ನೋಂದಾಯಿಸಬೇಕು ಎಂದು ದೇವಸ್ಥಾನದ ಅಧ್ಯಕ್ಷ ಎಚ್. ಧನಂಜಯ ಶೆಟ್ಟಿ, ಕಾರ್ಯನಿರ್ವಹಣಾ ಅಧಿಕಾರಿ ಎಸ್.ಪಿ.ಬಿ. ಮಹೇಶ ತಿಳಿಸಿದ್ದಾರೆ. ಮಾಹಿತಿಗೆ ದೇವಸ್ಥಾನ ಕಚೇರಿ (9449470403, 9071160933) ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.