ADVERTISEMENT

ಲಂಚ ಸ್ವೀಕಾರ; ಆರ್‌ಟಿಒ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 19:21 IST
Last Updated 16 ಮಾರ್ಚ್ 2019, 19:21 IST
ವರ್ಣೇಕರ್, ಪ್ರಾದೇಶಿಕ ಸಾರಿಗೆ ಅಧಿಕಾರಿ
ವರ್ಣೇಕರ್, ಪ್ರಾದೇಶಿಕ ಸಾರಿಗೆ ಅಧಿಕಾರಿ    

ಉಡುಪಿ: ಬೆಂಕಿಗಾಹುತಿಯಾದ ಕಾರಿನ ತೆರಿಗೆ ಮರುಪಾವತಿ ಸಂಬಂಧ ವಾಹನ ಮಾಲೀಕರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಉಡುಪಿ ಎಸಿಬಿ ಅಧಿಕಾರಿಗಳು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ.ವರ್ಣೇಕರ್ ಹಾಗೂ ಸಹಾಯಕ ಮುನಾಫ್‌ ಅವರನ್ನು ಬಂಧಿಸಿದ್ದಾರೆ.

ಈಚೆಗೆ ಬೆಂಗಳೂರಿನ ಏರ್ ಶೋ ಸಂದರ್ಭ ಸಂಭವಿಸಿದ ಬೆಂಕಿ ದುರಂತದಲ್ಲಿ ಉಡುಪಿಯ ವಿಘ್ನೇಶ್ ಎಂಬುವರ ಕಾರು ಸುಟ್ಟು ಹೋಗಿತ್ತು. ಈ ಸಂಬಂಧ ತೆರಿಗೆಯಾಗಿ ಪಾವತಿಸಿದ್ದ ₹ 65,000 ಸರ್ಕಾರದಿಂದ ವಾಪಸ್ ಬರಬೇಕಿತ್ತು. ಈ ಹಣ ಬಿಡುಗಡೆಗೆ ಆರ್‌ಟಿಒ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಚಾರವಾಗಿ ವಿಘ್ನೇಶ್‌ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ದೂರಿನನ್ವಯಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಶನಿವಾರ ಮಧ್ಯಾಹ್ನ ಮಣಿಪಾಲದಲ್ಲಿರುವ ಆರ್‌ಟಿಒ ಕಚೇರಿ ಮೇಲೆ ದಾಳಿ ಮಾಡಿ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿ ವರ್ಣೇಕರ್ ಹಾಗೂ ಮುನಾಫ್ ಎಂಬುವರನ್ನು ಬಂಧಿಸಲಾಗಿದೆ.

ADVERTISEMENT

ಉಡುಪಿ ಎಸಿಬಿ ಡಿವೈಎಸ್ಪಿ ಮಂಜುನಾಥ್, ಪೊಲೀಸ್ ಇನ್‌ಸ್ಪೆಕ್ಟರ್ಜಯರಾಮ ಗೌಡ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.