
ಕುಂದಾಪುರ: ಇಲ್ಲಿನ ಹೋಟೆಲ್ ಹರಿಪ್ರಸಾದ್ ಅಕ್ಷತಾ ಹಾಲ್‌ನಲ್ಲಿ ಆಲ್ ಇಂಡಿಯಾ ಬಿಎಸ್ಎನ್ಎಲ್ ಡಿ.ಒ.ಟಿ ಪೆನ್ಶನರ್ಸ್ ಅಸೋಸಿಯೇಷನ್ ಕುಂದಾಪುರ ಘಟಕದ ದ್ವೈವಾರ್ಷಿಕ ಮಹಾ ಅಧಿವೇಶನ ನಡೆಯಿತು.
ಕುಂದಾಪುರ ಘಟಕದ ಅಧ್ಯಕ್ಷ ರತ್ನಾಕರ್ ಶೇಟ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಘಟಕದ ಜೊತೆ ಕಾರ್ಯದರ್ಶಿ ವಿ.ತಿಮ್ಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪ ಕಾರ್ಯದರ್ಶಿ ಬಿ.ಕೃಷ್ಣ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ನಿಯೋಜ ಘೋಷಣೆ ಮಾಡಿ, ಬಿಎಸ್ಎನ್ಎಲ್‌ನ ಇತ್ತೀಚಿನ ವಿದ್ಯಮಾನಗಳ ಕುರಿತು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕೋಶಾಧಿಕಾರಿ ಬಿ.ಕೆ.ಕೃಷ್ಣ, ಮಂಗಳೂರು ಘಟಕದ ಅಧ್ಯಕ್ಷ ಬಾಬು ಕುಂಬ್ಳೆ, ಉಡುಪಿ ಘಟಕದ ಸದಸ್ಯ ಎಸ್.ಎಸ್ ಶೇಟ್ ಮತ್ತು ಉಡುಪಿ ಘಟಕದ ಕಾರ್ಯದರ್ಶಿ ರಮೇಶ್ ಕರ್ಕೇರ, ಕುಂದಾಪುರ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಸಿ.ಎಚ್.ಜಗನ್ನಾಥ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸೂರ್ಯಕಾಂತಿ, ಖಜಾಂಚಿ ಜಯಲಕ್ಷ್ಮಿ ಕೊತ್ವಾಲ್, ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ರಘುವೀರ ಕೆ ಇದ್ದರು.
80 ವರ್ಷ ವಯೋಮಾನ ಮೀರಿದ ನಾಲ್ವರು ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. 70 ವರ್ಷ ವಯೋಮಾನ ಮೀರಿದ 30ಕ್ಕೂ ಹೆಚ್ಚು ಹಿರಿಯ ಸದಸ್ಯರನ್ನು ಗೌರವಿಸಲಾಯಿತು.
ಪ್ರೇಮಕಲಾ ಪ್ರಾರ್ಥಿಸಿದರು. ಕುಂದಾಪುರ ಶಾಖಾ ಕಾರ್ಯದರ್ಶಿ ಕುಮಾರನ್ ಪಿ. ವರದಿ ವಾಚಿಸಿದರು. ಕೋಶಾಧಿಕಾರಿ ಎಸ್.ಪಿ.ನಾವಡ ಲೆಕ್ಕ ಪತ್ರ ಮಂಡಿಸಿದರು. ಎ.ಎಂ.ಪೂಜಾರಿ ಸಹಕರಿದರು. ಕೆ.ಜಿ.ನಾಯ್ಕ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.