ADVERTISEMENT

ಆಸಕ್ತಿಗೆ ಅನುಗುಣವಾದ ಕ್ಷೇತ್ರ ಆರಿಸಿ

ಹೆಮ್ಮಾಡಿ: ಜನತಾ ಅವಿಷ್ಕಾರ್ 2ಕೆ25 ಬಿಸಿನೆಸ್ ಡೇ ಉದ್ಘಾಟಿಸಿದ ಉದ್ಮಿ ಶಂಕರ್

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 5:38 IST
Last Updated 23 ನವೆಂಬರ್ 2025, 5:38 IST
ಕುಂದಾಪುರ ಸಮೀಪದ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನಲ್ಲಿ ಶನಿವಾರ ನಡೆದ ಜನತಾ ಅವಿಷ್ಕಾರ್ 2ಕೆ25 ಬಿಸಿನೆಸ್ ಡೇ ಕಾರ್ಯಕ್ರಮವನ್ನು ಉದ್ಯಮಿ ಜಿ.ಶಂಕರ್ ಉದ್ಘಾಟಿಸಿದರು. ಕೆ.ಗೋಪಾಲ ಪೂಜಾರಿ, ಆನಂದ ಸಿ ಕುಂದರ್ ಮುಂತಾದವರಿದ್ದರು.
ಕುಂದಾಪುರ ಸಮೀಪದ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನಲ್ಲಿ ಶನಿವಾರ ನಡೆದ ಜನತಾ ಅವಿಷ್ಕಾರ್ 2ಕೆ25 ಬಿಸಿನೆಸ್ ಡೇ ಕಾರ್ಯಕ್ರಮವನ್ನು ಉದ್ಯಮಿ ಜಿ.ಶಂಕರ್ ಉದ್ಘಾಟಿಸಿದರು. ಕೆ.ಗೋಪಾಲ ಪೂಜಾರಿ, ಆನಂದ ಸಿ ಕುಂದರ್ ಮುಂತಾದವರಿದ್ದರು.   

ಕುಂದಾಪುರ: ‘ಎಲ್ಲಾ ವಿದ್ಯಾರ್ಥಿಗಳು ಡಾಕ್ಟರ್, ಎಂಜಿನಿಯರ್ ಆಗಲು ಸಾಧ್ಯವಿಲ್ಲ. ಅವರವರ ಆಸಕ್ತಿಗೆ ಅನುಗುಣವಾಗಿ ಭವಿಷ್ಯದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ. ಶಂಕರ್ ಹೇಳಿದರು.

ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ನಡೆದ ‘ಜನತಾ ಅವಿಷ್ಕಾರ್ 2ಕೆ25 ಬಿಸಿನೆಸ್ ಡೇ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಕ್ಷೇತ್ರದಲ್ಲೂ ಭವಿಷ್ಯ ರೂಪಿಸಿಕೊಳ್ಳುವ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಮಾರುಕಟ್ಟೆ ಅಧ್ಯಯನ ಮಾಡಿ ವ್ಯವಹಾರ ಕುದುರಿಸುವುದು ಒಂದು ಕಲೆ. ವಿದ್ಯಾರ್ಥಿ ಜೀವನದಲ್ಲಿ ವ್ಯಾವಹಾರಿಕಾ ಪ್ರತಿಭೆ ತೋರ್ಪಡಿಸಲು ಈ ರೀತಿಯ ಕಾರ್ಯಕ್ರಮ ಆಯೋಜನೆಯಾಗಿರುವುದು ಸ್ತುತ್ಯರ್ಹ ಎಂದರು.

ADVERTISEMENT

ವಿದ್ಯಾರ್ಥಿ ವ್ಯವಹಾರ ಮಳಿಗೆ ಉದ್ಘಾಟಿಸಿದ ಕೋಟ ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ, ವಿಜ್ಞಾನ, ವಾಣಿಜ್ಯ, ಕಲಾ ಕ್ಷೇತ್ರಗಳ ವಿದ್ಯಾಭ್ಯಾಸಕ್ಕೆ ಬೇರೆ ಬೇರೆ ಅವಕಾಶಗಳಿವೆ. ಸಂತೆ ವ್ಯಾಪಾರ, ವಹಿವಾಟಿನಿಂದ ಮಾರಾಟಗಾರರಿಗೆ ಸಂತೃಪ್ತಿ ದೊರಕುತ್ತದೆ. ಸ್ವಾವಲಂಬಿ ಬದುಕು ಕಟ್ಟಿಕೊಂಡು ಕನಿಷ್ಠ 10 ಜನರಿಗೆ ಉದ್ಯೋಗಾವಕಾಶ ನೀಡುವ ಸಾಧನೆ ತೋರಬೇಕು. ಸಾಧನೆಗೆ ಗುರಿ, ಪ್ರಾಮಾಣಿಕತೆ, ಕಠಿಣ ಶ್ರಮ, ಬದ್ಧತೆ ಇರಬೇಕು ಎಂದರು.

ಮುಖಂಡ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಂಬದಕೋಣೆ ರೈತರ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜನತಾ ಸಮೂಹ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರ್ತಿ ಚಿತ್ರಾ ಕಾರಂತ್, ಆದಿಪರಾಶಕ್ತಿ ಗುರುಪೀಠ ಯಡಮೊಗೆಯ ರಾಜಾರಾಮ ಗುರೂಜಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್‌.ಕೆ. ಮರವಂತೆ, ಉದ್ಯಮಿಗಳಾದ ಕಿರಣ್ ದೇವಾಡಿಗ, ಚಂದ್ರ ಕುಂದರ್ ಬೆಂಗಳೂರು, ಸಮುದ್ಯತಾ ಗ್ರೂಪ್ಸ್‌ನ ಯೋಗೀಂದ್ರ ತಿಂಗಳಾಯ, ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಉದಯ್‌ ಕುಮಾರ್‌ ಹಟ್ಟಿಯಂಗಡಿ, ಚೇತನ್‌ ಕುಮಾರ್ ಹಳ್ಳಿಹೊಳೆ, ಪ್ರಗತಿ ವಿವಿಧೋದ್ದೇಶ ಮಹಿಳಾ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಘವೇಂದ್ರ ಕುಲಾಲ್, ಶಿಕ್ಷಕ ಧರ್ಮೇಂದ್ರ ಉಪ್ಪುಂದ ಭಾಗವಹಿಸಿದ್ದರು.

ಜಿ. ಶಂಕರ್, ಆನಂದ ಸಿ. ಕುಂದರ್, ರಾಜಾರಾಮ ಗುರೂಜಿ ಅವರನ್ನು ಸನ್ಮಾನಿಸಲಾಯಿತು. ಸ್ಪರ್ಧೆಯ ತೀರ್ಪುಗಾರರಾದ ಸದಾನಂದ ಬೈಂದೂರು, ಹೇಮಾ ಕಾಳಾವರ, ಸುಮಂಗಲಾ ಕಿಸ್ಮತಿ, ನಿಶ್ಚಿತಾ ಭಟ್ಕಳ, ಸಂತೋಷ್, ರಮಾನಂದ, ರಾಮ್ ಶೆಟ್ಟಿ, ಮಂಜುನಾಥ ಮಯ್ಯ, ಕೆ.ಎಂ.ಹೊಸೂರಿ, ಹರಿಪ್ರಸಾದ್ ಉಡುಪಿ, ತೆಜಸ್ ಬಲ್ಲಾಳ್, ರಂಜಿತ್ ಕೋಟೇಶ್ವರ ಅವರನ್ನು ಗೌರವಿಸಲಾಯಿತು. 115 ಮಾರಾಟ ಮಳಿಗೆಗಳಿದ್ದವು. ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಅಭಿಲಾಷ್ ಕ್ಷತ್ರಿಯ ಸ್ವಾಗತಿಸಿದರು. ಉದಯ್ ನಾಯ್ಕ್ ನಿರೂಪಿಸಿದರು. ಉಪ ಪ್ರಾಂಶುಪಾಲ ರಮೇಶ್ ಪೂಜಾರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.