ಹೆಬ್ರಿ: ಮಠದಬೆಟ್ಟು ಸೇತುವೆ ಸಮೀಪ ಸೀತಾ ನದಿಗೆ ಎಸೆಯಲಾಗಿದ್ದ ಕಸವನ್ನು ಹೆಬ್ರಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಶನಿವಾರ ತೆರವು ಮಾಡಿದರು.
‘ವರ್ತಕರು, ಹೋಟೆಲ್ ಮಾಲೀಕರು, ಕಸವನ್ನು ಹೇಗೆ ನಿರ್ವಹಣೆ ಮಾಡುತ್ತಾರೆ ಎನ್ನುವುದರ ಮೇಲೆ ಗ್ರಾಮ ಪಂಚಾಯಿತಿ ಸಿಬ್ಬಂದಿ ನಿಗಾ ವಹಿಸಬೇಕು. ಸಾರ್ವಜನಿಕ ಸ್ಥಳ, ರಸ್ತೆ ಬದಿ, ನದಿ ತೀರದಲ್ಲಿ ಕಸವನ್ನು ತಂದು ಹಾಕಿದರೆ ಮೊದಲು ಎಚ್ಚರಿಕೆ ನೀಡಿ ದಂಡ ಕಟ್ಟಿಸಿಕೊಳ್ಳಬೇಕು. ಇದೇ ಪುನರಾವರ್ತನೆಯಾದರೆ ಅಂಗಡಿಗಳಿಗೆ ನೀಡುವ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸಬೇಕು’ ಎಂದು ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕೆ. ಜಿ, ಗ್ರಾ.ಪಂ ಪಿಡಿಒಗಳಿಗೆ ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.