ADVERTISEMENT

ಗೋಪಾಲ ಭಂಡಾರಿ ಪುತ್ಥಳಿ ನಿರ್ಮಾಣ: ಸಮಾಲೋಚನಾ ಸಭೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 13:59 IST
Last Updated 23 ಏಪ್ರಿಲ್ 2025, 13:59 IST
ಗೋಪಾಲ ಭಂಡಾರಿ
ಗೋಪಾಲ ಭಂಡಾರಿ   

ಹೆಬ್ರಿ: ಕಾರ್ಕಳ ಕ್ಷೇತ್ರದ ಶಾಸಕರಾಗಿ ಅಜಾತಶತ್ರು ಜನನಾಯಕರಾಗಿದ್ದ ಗೋಪಾಲ ಭಂಡಾರಿ ಅವರ ಸಂಸ್ಮರಣೆಗಾಗಿ ಹೆಬ್ರಿಯಲ್ಲಿ ಸರ್ಕಲ್, ಶಿಲಾ ಪುತ್ಥಳಿ, ಜೀವನ ಚರಿತ್ರೆಯ ಗ್ರಂಥ ಸಮರ್ಪಣೆ ಮಾಡಲು ಇದೇ 27ರಂದು ಮಧ್ಯಾಹ್ನ 3ಕ್ಕೆ ಚೈತನ್ಯ ಯುವ ವೃಂದದಲ್ಲಿ ಸಮಾಲೋಚನಾ ಸಭೆ ಆಯೋಜಿಸಲಾಗಿದೆ.

ಗೋಪಾಲ ಭಂಡಾರಿ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ವಿನಂತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT