ADVERTISEMENT

ಕೋವಿಡ್–19 | ₹ 1.10 ಲಕ್ಷ ಬಾಡಿಗೆ ಮನ್ನಾ ಮಾಡಿದ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 14:48 IST
Last Updated 28 ಮಾರ್ಚ್ 2020, 14:48 IST

ಉಡುಪಿ: ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಬಾಡಿಗೆದಾರರ ರಕ್ಷಣೆಗೆ ಉಡುಪಿ ಉದ್ಯಮಿಯೊಬ್ಬರು ನಿಂತಿದ್ದು, ಒಂದು ತಿಂಗಳ ₹ 1.10 ಲಕ್ಷ ಬಾಡಿಗೆಯನ್ನು ಮನ್ನಾ ಮಾಡಿದ್ದಾರೆ.

ಕೊರೊನಾ ತಡೆಗೆ ರಾಜ್ಯವೇ ಲಾಕ್‌ಡೌನ್‌ ಆಗಿದ್ದು, ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಇಂತಹ ಸಂದರ್ಭದಲ್ಲಿ ಬಾಡಿಗೆದಾರರರಿಂದ ಹಣ ಪಡೆಯುವುದು ಸರಿಯಲ್ಲ. ಮಾನವೀಯತೆ ದೃಷ್ಟಿಯಿಂದ ಮಾರ್ಚ್‌ 20ರಿಂದ ಏ.20ರವರೆಗೆ ಬಾಡಿಗೆ ಮನ್ನಾ ಮಾಡಲು ನಿರ್ಧರಿಸಿದ್ದೇನೆ ಎಂದು ಉದ್ಯಮಿ ಕಿಶನ್ ಹೆಗ್ಡೆ ಕೊಳ್ಕೆಬೈಲು ‘ಪ್ರಜಾವಾಣಿ’ಗೆ ತಿಳಿಸಿದರು.

ಸೈಬರ್‌ಕಟ್ಟೆಯಲ್ಲಿ 2 ವಾಣಿಜ್ಯ ಮಳಿಗೆಗಳಿದ್ದು. 14 ಅಂಗಡಿಗಳಿಂದ ಬಾಡಿಗೆ ಬರುತ್ತಿತ್ತು. ಈಗಾಗಲೇ ಎಲ್ಲರಿಗೂ ಈ ತಿಂಗಳ ಬಾಡಿಗೆ ಬೇಡ ಎಂದು ತಿಳಿಸಿದ್ದೇನೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ಮುಂದೆಯೂ ಬಾಡಿಗೆದಾರರ ಹಿತ ಕಾಯುತ್ತೇನೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.