ADVERTISEMENT

ಉಡುಪಿ: 51 ಮಂದಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 14:48 IST
Last Updated 10 ಏಪ್ರಿಲ್ 2021, 14:48 IST

ಉಡುಪಿ: ಜಿಲ್ಲೆಯಲ್ಲಿ ಶನಿವಾರ 51 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, ಉಡುಪಿಯ 24, ಕುಂದಾಪುರದ 24, ಕಾರ್ಕಳದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರಲ್ಲಿ 27 ಪುರುಷರು ಹಾಗೂ 24 ಮಹಿಳೆಯರಿದ್ದು, 13 ಮಂದಿಯಲ್ಲಿ ರೋಗದ ಲಕ್ಷಣಗಳಿದ್ದರೆ 38 ಮಂದಿಯಲ್ಲಿ ಲಕ್ಷಣಗಳು ಕಾಣಿಸಿಕೊಂಡಿಲ್ಲ.‌

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಪ್ರಕರಣಗಳ ಸಂಖ್ಯೆ 25,880ಕ್ಕೆ ಏರಿಕೆಯಾಗಿದ್ದು, 347 ಸಕ್ರಿಯ ಸೋಂಕಿತರು ಇದ್ದಾರೆ. 25341 ಮಂದಿ ಗುಣಮುಖರಾಗಿದ್ದಾರೆ. 192 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಇದುವರೆಗೂ 45 ವರ್ಷ ಮೇಲ್ಪಟ್ಟ 1,09,529 ಮಂದಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದು, ಮೊದಲ ಹಂತದಲ್ಲಿ 22,184 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್‌, 16,349 ಮಂದಿಗೆ ಎರಡನೇ ಡೋಸ್‌ ಹಾಕಲಾಗಿದೆ. 4,108 ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್‌, 2,551 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.