ADVERTISEMENT

ಉಡುಪಿ: 152 ಮಂದಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 14:39 IST
Last Updated 18 ಏಪ್ರಿಲ್ 2021, 14:39 IST

ಉಡುಪಿ: ಜಿಲ್ಲೆಯಲ್ಲಿ 152 ಮಂದಿಗೆ ಭಾನುವಾರ ಕೋವಿಡ್‌ ದೃಢಪಟ್ಟಿದ್ದು, ಉಡುಪಿಯ 107,ಕುಂದಾಪುರದ 28, ಕಾರ್ಕಳದ 16 ಹಾಗೂ ಬೇರೆ ಜಿಲ್ಲೆಯ ಒಬ್ಬರು ಸೋಂಕಿತರಿದ್ದಾರೆ.

ಸೋಂಕಿತರಲ್ಲಿ 80 ಪುರುಷರು, 72 ಮಹಿಳೆಯರು ಇದ್ದು, 71 ಮಂದಿಗೆ ರೋಗದ ಲಕ್ಷಣಗಳು ಕಾಣಿಸಿಕೊಂಡರೆ, 81 ಮಂದಿಗೆ ಲಕ್ಷಣಗಳಿಲ್ಲ. 28 ಸೋಂಕಿತರು ಆಸ್ಪತ್ರೆಯಲ್ಲಿ, 124 ಮಂದಿ ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

25887 ಮಂದಿ ಇದುವರೆಗೂ ಗುಣಮುಖರಾಗಿದ್ದು, 660 ಸಕ್ರಿಯ ಸೋಂಕಿತರಿದ್ದಾರೆ. 193 ಮಂದಿ ಮೃತಪಟ್ಟಿದ್ದಾರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.