ADVERTISEMENT

ಉಡುಪಿ: ಇಬ್ಬರು ಸೋಂಕಿತರು ಸಾವು: 660 ಮಂದಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 15:48 IST
Last Updated 30 ಏಪ್ರಿಲ್ 2021, 15:48 IST

ಉಡುಪಿ: ಜಿಲ್ಲೆಯಲ್ಲಿ ಸೋಂಕಿನ ಜತೆಗೆ ಕೋವಿಡ್‌ ಮರಣ ಪ್ರಮಾಣವೂ ಹೆಚ್ಚುತ್ತಿದ್ದು ಶುಕ್ರವಾರ ಇಬ್ಬರು ಮೃತಪಟ್ಟಿದ್ದಾರೆ. ಉಡುಪಿಯ 50 ವರ್ಷದ ವ್ಯಕ್ತಿ ಹಾಗೂ 73 ವರ್ಷದ ವೃದ್ಧರು ಮೃತಪಟ್ಟವರು.

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಮೃತ ಸೋಂಕಿತರ ಸಂಖ್ಯೆ 198ಕ್ಕೆ ಏರಿಕೆಯಾಗಿದೆ.

ಮತ್ತೊಂದೆಡೆ ಸೋಂಕಿನ ಪ್ರಮಾಣವೂ ಹೆಚ್ಚುತ್ತಿದ್ದು, ಶುಕ್ರವಾರ 660 ಮಂದಿಗೆ ಕೋವಿಡ್‌ ದೃಢಪಟ್ಟಿದೆ. 371 ಪುರುಷರು, 289 ಮಹಿಳೆಯರು ಸೋಂಕಿತರಾಗಿದ್ದು, 407 ಮಂದಿಯಲ್ಲಿ ರೋಗದ ಲಕ್ಷಣಗಳು ಕಂಡುಬಂದರೆ, 253 ಮಂದಿಯಲ್ಲಿ ಲಕ್ಷಣಗಳು ಇಲ್ಲ.

ADVERTISEMENT

ಉಡುಪಿ ತಾಲ್ಲೂಕಿನ 346, ಕುಂದಾಪುರ ತಾಲ್ಲೂಕಿನ 217, ಕಾರ್ಕಳ ತಾಲ್ಲೂಕಿನ 93 ಹಾಗೂ ಬೇರೆ ಜಿಲ್ಲೆಗಳ 4 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 57 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 603 ಸೋಂಕಿತರು ಹೋಂ ಐಸೊಲೇಷನ್‌ನಲ್ಲಿದ್ದಾರೆ.

ಒಟ್ಟು ಸೋಂಕಿತರು–31,542

ಸಕ್ರಿಯ ಪ್ರಕರಣ–2,596

ಗುಣಮುಖ ಆದವರು–28,748

ಒಟ್ಟು ಸಾವು–198

ಹೊಸ ಪ್ರಕರಣ–660

ಗುಣಮುಖ–419

ಸಾವು–2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.