ADVERTISEMENT

ಉಡುಪಿ: 349 ಕೋವಿಡ್‌ ಪಾಸಿಟಿವ್‌‌; 360 ಗುಣಮುಖ

ಇಬ್ಬರು ಸಾವು, 9,390ಕ್ಕೇರಿದ ಸೋಂಕಿನ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 14:01 IST
Last Updated 20 ಆಗಸ್ಟ್ 2020, 14:01 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಉಡುಪಿ: ಕೊರೊನಾ ಸೋಂಕು ಹೆಚ್ಚುತ್ತಲೇ ಇದ್ದು, ಗುರುವಾರ 349 ಮಂದಿಯಲ್ಲಿ ಕೋವಿಡ್‌–19 ದೃಢಪಟ್ಟಿದೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 9,390ಕ್ಕೇರಿದೆ.

ಉಡುಪಿಯಲ್ಲಿ ಹೆಚ್ಚು

ಉಡುಪಿ ತಾಲ್ಲೂಕಿನಲ್ಲಿ ಅತಿ ಹೆಚ್ಚು 162, ಕುಂದಾಪುರದಲ್ಲಿ 100, ಕಾರ್ಕಳದಲ್ಲಿ 76 ಹಾಗೂ ಬೇರೆ ಜಿಲ್ಲೆಗಳ 11 ಮಂದಿ ಸೋಂಕಿತರಾಗಿದ್ದಾರೆ. 192 ಪುರುಷರು ಹಾಗೂ 157 ಮಹಿಳೆಯರು ಇದ್ದಾರೆ. 159 ಜನರಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ 190 ಸೋಂಕಿತರಿಗೆ ರೋಗ ಲಕ್ಷಣಗಳು ಇಲ್ಲ.

ADVERTISEMENT

ಪ್ರಾಥಮಿಕ ಸಂಪರ್ಕದಿಂದ 130, ಶೀತ ಜ್ವರವಿದ್ದ 137, ತೀವ್ರ ಉಸಿರಾಟದ ಸಮಸ್ಯೆ ಇದ್ದ 12, ಅಂತರ ಜಿಲ್ಲೆಗಳ ಪ್ರಯಾಣ ಹಿನ್ನೆಲೆ ಹೊಂದಿದ್ದ 6 ಹಾಗೂ ವಿದೇಶ ಪ್ರಯಾಣ ಬೆಳೆಸಿದ್ದ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದ 63 ಸೋಂಕಿತರ ಸೋಂಕಿನ ಮೂಲ ಪತ್ತೆಯಾಗಿಲ್ಲ.

ಚಿಕಿತ್ಸೆ ಅಗ‌ತ್ಯವಿದ್ದ 132 ರೋಗಿಗಳಿಗೆ ಕೋವಿಡ್‌ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ, 217 ಸೋಂಕಿತರಿಗೆ ಹೋಂ ಐಸೊಲೇಷನ್‌ನಲ್ಲಿರಿಸಲಾಗಿದೆ.

ಇಬ್ಬರು ಸಾವು

ರಕ್ತದೊತ್ತಡ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಾರ್ಕಳದ 56 ವರ್ಷದ ಮಹಿಳೆ ಹಾಗೂ ಉಸಿರಾಟ ಹಾಗೂ ಕಿಡ್ನಿ ಸಮಸ್ಯೆ ಹೊಂದಿದ್ದ ಉಡುಪಿಯ 69 ವರ್ಷದ ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಮೃತ ಸೋಂಕಿತರ ಸಂಖ್ಯೆ 80ಕ್ಕೇರಿದೆ.

2078 ಮಾದರಿ ಸಂಗ್ರಹ

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಸೋಂಕು ಲಕ್ಷಣಗಳು ಕಾಣಿಸಿಕೊಂಡ 2,078 ಶಂಕಿತರನ್ನು ಕೋವಿಡ್‌ ಪರೀಕ್ಷೆಗೊಳಪಡಿಸಿ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 1,093 ವರದಿಗಳು ಬರುವುದು ಬಾಕಿ ಇದೆ.

360 ಗುಣಮುಖ

ಸೋಂಕಿನ ಸಂಖ್ಯೆ ಹೆಚ್ಚಾಗುವುದರ ಜತೆಗೆ ಗುಣಮುಖರಾಗುತ್ತಿರುವರ ಸಂಖ್ಯೆಯೂ ಹೆಚ್ಚುತ್ತಿದೆ. ಗುರುವಾರ 360 ರೋಗಿಗಳು ಗುಣರಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ 6,492 ಮಂದಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ. ಸದ್ಯ 1,249 ಸೋಂಕಿತರು ಆಸ್ಪತ್ರೆಗಳಲ್ಲಿ, 1,569 ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳು 2,818 ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.