ADVERTISEMENT

ಉಡುಪಿ: 309 ಗುಣಮುಖ, 117 ಮಂದಿಗೆ ಕೋವಿಡ್‌

ಇಬ್ಬರು ಸಾವು; ಒಟ್ಟು ಪ್ರಕರಣ 10,133

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 15:01 IST
Last Updated 23 ಆಗಸ್ಟ್ 2020, 15:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಜಿಲ್ಲೆಯಲ್ಲಿ ಭಾನುವಾರ ಇಬ್ಬರು ಕೋವಿಡ್‌ ಸೋಂಕಿತರು ಮೃತಪಟ್ಟಿದ್ದು, 117 ಮಂದಿಗೆ ಸೋಂಕು‌ ದೃಢಪಟ್ಟಿದೆ. ಸೋಂಕಿತರಲ್ಲಿ ಉಡುಪಿಯ 58, ಕುಂದಾಪುರದ 35, ಕಾರ್ಕಳದ 20 ಹಾಗೂ ಬೇರೆ ಜಿಲ್ಲೆಗಳ ನಾಲ್ವರು ಸೇರಿದ್ದಾರೆ.‌

ಪ್ರಾಥಮಿಕ ಸಂಪರ್ಕದಿಂದ 68, ಶೀತಜ್ವರದ ಲಕ್ಷಣಗಳಿದ್ದ 30, ತೀವ್ರ ಉಸಿರಾಟದ ಸಮಸ್ಯೆ ಇದ್ದ ನಾಲ್ವರು ಹಾಗೂ ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆ ಹೊಂದಿದ್ದ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. 14 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ.

65 ಪುರುಷರು ಹಾಗೂ 52 ಮಹಿಳೆಯರಿಗೆ ಸೋಂಕು ತಗುಲಿದ್ದು, 39 ಮಂದಿಯಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದರೆ, 78 ರೋಗಿಗಳಲ್ಲಿ ಲಕ್ಷಣಗಳು ಪತ್ತೆಯಾಗಿಲ್ಲ. 46 ಸೋಂಕಿತರಿಗೆ ಕೋವಿಡ್‌ ಆಸ್ಪತ್ರೆ ಹಾಗೂ ಆರೈಕೆ ಕೇಂದ್ರಗಳಲ್ಲಿ, 71 ಮಂದಿಗೆ ಹೋಂ ಐಸೊಲೇಷನ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

967 ಮಾದರಿ ಸಂಗ್ರಹ:967 ಶಂಕಿತರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಭಾನುವಾರ ಬಂದ ವರದಿಗಳಲ್ಲಿ 372 ನೆಗೆಟಿವ್‌ ಹಾಗೂ 117 ಪಾಸಿಟಿವ್ ಇವೆ. 1,330 ವರದಿಗಳು ಬರುವುದು ಬಾಕಿ ಇದೆ.

309 ಗುಣಮುಖ:ಭಾನುವಾರ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದ್ದು, 309 ರೋಗಿಗಳು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರು 2,648 ಇದ್ದರೆ, 7,401 ಮಂದಿ ಗುಣವಾಗಿ ಮನೆಗೆ ತೆರಳಿದ್ದಾರೆ.

ಇಬ್ಬರು ಸಾವು:ಕಿಡ್ನಿ ತೊಂದರೆ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಉಡುಪಿ ತಾಲ್ಲೂಕಿನ 42 ವರ್ಷದ ವ್ಯಕ್ತಿ ಹಾಗೂ ಕಾರ್ಕಳದ 73 ವರ್ಷದ ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 84ಕ್ಕೇರಿಕೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 10,133ಕ್ಕೆ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.