ಸಾಮಾಜಿಕ ಜಾಲತಾಣ
ರಾಯಿಟರ್ಸ್ ಚಿತ್ರ
ಕಾರ್ಕಳ: ಪಕ್ಷವೊಂದರ ಪರವಾಗಿ ಸಾಮಾಜಿಕ ಮಾಧ್ಯಮವೊಂದರಲ್ಲಿ ಪ್ರಚಾರ ಮಾಡುವ ವೇಳೆ ಪತ್ರಕರ್ತರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪತ್ರಕರ್ತರ ಕ್ಷಮೆ ಕೇಳಿದ್ದಾರೆ.
ಪ್ರಖ್ಯಾತ್ ಬಿ.ಜೆ., ಹರಿಪ್ರಸಾದ್ ಶೆಟ್ಟಿ ಎಂಬುವರು ರಾಜಕೀಯ ದಾಳದಿಂದ ಪತ್ರಕರ್ತರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಈ ಬಗ್ಗೆ ಕಾರ್ಕಳ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಶರೀಫ್ ನೇತೃತ್ವದಲ್ಲಿ ಪತ್ರಕರ್ತರು ಕಾರ್ಕಳ ಎಎಸ್‌ಪಿ ಡಾ.ಹರ್ಷ ಪ್ರಿಯಂವದಾ ಅವರಿಗೆ ಮನವಿ ಸಲ್ಲಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು.
ಕಾರ್ಕಳ ಪೊಲೀಸರು ಆರೋಪಿಗಳಾದ ಪ್ರಖ್ಯಾತ್ ಬಿ.ಜೆ., ಹರಿಪ್ರಸಾದ್ ಶೆಟ್ಟಿ ಅವರನ್ನು ಕಚೇರಿಗೆ ಕರೆಸಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ ಪೋಸ್ಟ್‌ಗೆ ಸಂಬಂಧಿಸಿ ವಿವರಣೆ ಕೇಳಿದ್ದರು.
‘ನಾವು ಆ ಸಂದರ್ಭದಲ್ಲಿ ಮಾಡಿರುವ ಕಮೆಂಟ್‌ನಲ್ಲಿ ಅಪಾರ್ಥವಾಗಿರುವ ವಿಷಯ ನಮಗೆ ತಿಳಿಯಿತು. ಈ ಕುರಿತು ಕ್ಷಮೆ ಕೇಳುವೆವು. ಇನ್ನು ಮುಂದೆ ಇಂಥ ಪೋಸ್ಟ್ ಮಾಡುವುದಿ. ಇದನ್ನು ಮನ್ನಿಸಬೇಕು’ ಎಂದು ವಿನಂತಿಸಿಕೊಂಡಿದ್ದಾರೆ.
ಈ ಕುರಿತು ಆರೋಪಿಗಳಿಂದ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ.
ಮುಂದೆ ಇಂಥ ಪೋಸ್ಟ್ ಮಾಡಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಡಾ.ಹರ್ಷಾ ಪ್ರಿಯಂವದಾ ಅವರು ಕಾರ್ಕಳ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.