
ಹೆಬ್ರಿ: ದೊಂಡೇರಂಗಡಿ ಯತೀಶ್ ಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ಮುನಿಯಾಲು ಲಯನ್ಸ್ ಕ್ಲಬ್, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್ ಟ್ರಸ್ಟ್, ಉಡುಪಿ ಜಿಲ್ಲಾ ರಕ್ತನಿಧಿ, ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟಬಲ್ ಟ್ರಸ್ಟ್, ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೇರಂಗಡಿ ಸಹಯೋಗದಲ್ಲಿ ರಕ್ತದಾನ, ಕಣ್ಣಿನ ಉಚಿತ ತಪಾಸಣಾ ಶಿಬಿರ ಈಚೆಗೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕ್ಯಾಂಪ್ಕೊ ನಿರ್ದೇಶಕ ದಯಾನಂದ ಹೆಗ್ಡೆ, ಯತೀಶ್ ಶೆಟ್ಟಿ ಅವರ ಹದಿನಾರನೇ ಸ್ಮರಣೆಯು ಅವರು ಜೀವನದಲ್ಲಿ ಮಾಡಿದ ಸಮಾಜ ಸೇವೆ, ಕಷ್ಟದಲ್ಲಿರುವವರು, ಅಸಹಾಯಕರಿಗೆ ಸ್ಪಂದಿಸಿದ ರೀತಿ, ಉತ್ತಮ ಕೆಲಸ ಕಾರ್ಯಗಳ ಕೈಗನ್ನಡಿಯಾಗಿದೆ ಎಂದರು.
ಮುನಿಯಾಲು ಗೋಪಿನಾಥ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೊಂಡೇರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಚಂದ್ರಿಕಾ ಕಿಣಿ ಆರೋಗ್ಯ ಮಾಹಿತಿ ನೀಡಿದರು.
ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಖಜಾನೆ ಸಂದೇಶ್ ಶೆಟ್ಟಿ, ಡಾ.ಪ್ರಮೋದ್ ಕುಮಾರ್ ಹೆಗ್ಡೆ, ಜಿಲ್ಲಾ ರಕ್ತನಿಧಿಯ ಡಾ.ನವಮಿ, ಪ್ರಸಾದ್ ನೇತ್ರಾಲಯದ ಡಾ.ಟೀನಾ, ಲಯನ್ಸ್ ಕ್ಲಬ್‌ನ ಸಂಪತ್ ಪೂಜಾರಿ, ಶಂಕರ ಶೆಟ್ಟಿ, ಮಂಜುನಾಥ ಕೆ, ಗ್ರಾಮ ಪಂಚಾಯತಿ ಅಧ್ಯಕ್ಷ ಸುಕೇಶ ಹೆಗ್ಡೆ, ಮಾಜಿ ಅಧ್ಯಕ್ಷ ಜಗದೀಶ ಹೆಗ್ಡೆ, ಸದಸ್ಯ ದೀಕ್ಷಿತ ಶೆಟ್ಟಿ, ಪ್ರಸನ್ನ ದೇವಾಡಿಗ, ಉದ್ಯಮಿ ಯೋಗೀಶ್ ಮಲ್ಯ, ಯತೀಶ ಶೆಟ್ಟಿ ಅಭಿಮಾನಿ ಬಳಗದ ಸದಸ್ಯರು ಭಾಗವಹಿಸಿದ್ದರು.
108 ಜನರ ಕಣ್ಣಿನ ತಪಾಸಣೆ ನಡೆಸಿ 20 ಜನರಿಗೆ ಪೊರೆ ಶಸ್ತ್ರಚಿಕಿತ್ಸೆ, 59 ಜನರಿಗೆ ಕನ್ನಡಕ ವಿತರಿಸಲು ಆಯ್ಕೆ ಮಾಡಲಾಯಿತು. ರಕ್ತದಾನ ಶಿಬಿರದಲ್ಲಿ 62 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಅಶೋಕ್ ಕುಮಾರ್ ನಿರೂಪಿಸಿದರು. ಅಖಿಲೇಶ್ ಶೆಟ್ಟಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.