ಕುಂದಾಪುರ: ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶದ ಮರು ಮೌಲ್ಯಮಾಪನದಲ್ಲಿ 625ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿರುವ ವಿಕೆಆರ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಾಯಿಸ್ಪರ್ಶ್ ಅವರ ಮನೆಗೆ ತೆರಳಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಅವರನ್ನು ಗೌರವಿಸಿದ್ದಾರೆ.
ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಶೆಟ್ಟಿ ಸನ್ಮಾನಿಸಿದರು. ಸಾಯಿಸ್ಪರ್ಶ ಅವರು ನಗರದ ಖಾರ್ವಿಕೇರಿಯ ದೇವದಾಸ್, ಶಶಿಕಲಾ ದಂಪತಿ ಪುತ್ರಿ.
ಚಂದ್ರಶೇಖರ್ ಶೆಟ್ಟಿ ಮಾತನಾಡಿ, ಸಾಯಿಸ್ಪರ್ಶ ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವುದು ಕುಂದಾಪುರ ಶಿಕ್ಷಣ ವಲಯ, ಉಡುಪಿ ಜಿಲ್ಲೆಗೆ ಹೆಮ್ಮೆಯ ವಿಷಯ. ಅವರ ಮುಂದಿನ ಶೈಕ್ಷಣಿಕ ಭವಿಷ್ಯ ಉತ್ತಮವಾಗಿರಲಿ. ಸಾಧನೆಗೆ ಕಾರಣವಾದ ಪೋಷಕರು, ಶಾಲೆಯ ಶಿಕ್ಷಕರು ಅಭಿನಂದನಾರ್ಹರು ಎಂದರು.
ವಲಯದ ಎಸ್ಎಸ್ಎಲ್‌ಸಿ ನೋಡಲ್ ಶೇಖರ್ ಪಡುಕೋಣೆ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.