ಕಾಪು (ಪಡುಬಿದ್ರಿ): ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಜನ್ಮದಿನಾಚರಣೆ ಪ್ರಯುಕ್ತ ಮಿಲಾದುನ್ನಬಿ ಜಿಲ್ಲೆಯ ವಿವಿಧೆದೆಡೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು, ಬ್ರಹ್ಮಾವರ, ಕುಂದಾಪುರ, ಕಾಪು ತಾಲ್ಲೂಕಿನಾದ್ಯಂತ ಮುಸ್ಲಿಮರು ಮಿಲಾದ್ ಪ್ರಯುಕ್ತ ರ‍್ಯಾಲಿ ನಡೆಸಿದರು.
ಕಾಪು ತಾಲ್ಲೂಕಿನ ಕಾಪು, ಪೊಲಿಪು, ಮೂಳೂರು, ಉಚ್ಚಿಲ, ಎರ್ಮಾಳು, ಪಡುಬಿದ್ರಿ, ಹೆಜಮಾಡಿಯಲ್ಲಿ ರ‍್ಯಾಲಿಯಲ್ಲಿ ಪ್ರವಾದಿ ಮುಹಮ್ಮದ್ ಅವರ ಸಂದೇಶಗಳು, ಹಾಡುಗಳನ್ನು ಹಾಡಲಾಯಿತು. ಜಾಥಾ ಬಳಿಕ ಆಯಾಯ ಮಸೀದಿಗಳಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು.
ಪೊಲಿಪು ಮಸೀದಿಯಿಂದ ಹೊರಟ ಜಾಥಾ ರಾಷ್ಟ‌್ರೀಯ ಹೆದ್ದಾರಿ ಮೂಲಕ ತಲುಪಿತು. ಮಜೂರಿನಿಂದ ಹೊರಟ ಮೀಲಾದ್ ರ‍್ಯಾಲಿ ರಾಷ್ಟ್ರೀಯ ಹೆದ್ದಾರಿ ತಲುಪಿ ಅಲ್ಲಿಂದ ಪೊಲಿಪು ಮಸೀದಿಗೆ ತಲುಪಿತು. ಮದರಸ ವಿದ್ಯಾರ್ಥಿಗಳ ದಫ್ ಗಮನ ಸೆಳೆಯಿತು.
ಕುಂಜೂರು, ಪೊಲ್ಯ, ಭಾಸ್ಕರ್ ನಗರ ಮದರಸ ಮಕ್ಕಳ ರ್‍ಯಾಲಿ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ ಮೂಲಕ ಮೂಳೂರು ಜುಮಾ ಮಸೀದಿಗೆ ತಲುಪಿತು. ಮೆರವಣಿಗೆಯ ಉದ್ದಕ್ಕೂ ಸಿಹಿ ತಿಂಡಿ, ತಂಪು ಪಾನೀಯಗಳನ್ನು ನೀಡಲಾಯಿತು. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶ ಗೀತೆಗಳನ್ನು ಹಾಡಲಾಯಿತು.
ಪಡುಬಿದ್ರಿ ಜಮಾಅತ್ ವತಿಯಿಂದ ನಡೆದ ಮಿಲಾದ್ ರ‍್ಯಾಲಿ ಕಂಚಿನಡ್ಕ ಜುಮಾ ಮಸೀದಿಯಿಂದರ ಹೊರಟಿತು. ರಾಜ್ಯ ಹೆದ್ದಾರಿ, ಪಡುಬಿದ್ರಿ ಪೇಟೆ, ಮಾರ್ಕೆಟ್ ರಸ್ತೆ ಮೂಲಕ ಪಡುಬಿದ್ರಿ ಜುಮಾ ಮಸೀದಿಗೆ ಜಾಥಾ ಸಾಗಿತು. ಜಾಥಾದಲ್ಲಿ ಮದರಸ ಮಕ್ಕಳ ಸ್ಕೌಟ್ ಗಮನ ಸೆಳೆಯಿತು. ಕನ್ನಂಗಾರ್ ಜುಮಾ ಮಸೀದಿ ವತಿಯಿಂದಲೂ ಹೆಜಮಾಡಿಯಾದ್ಯಂತ ಜಾಥಾ ಸಂಚರಿಸಿತು. ಭಾರಿ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಮದರಸ ಮಕ್ಕಳ ದಫ್ ಆಕರ್ಷಕವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.