ADVERTISEMENT

ಝೂಮ್ ಆ್ಯಪ್‌ನಲ್ಲಿ ಈದ್ ಶುಭಾಶಯ ವಿನಿಮಯ

​ಪ್ರಜಾವಾಣಿ ವಾರ್ತೆ
Published 24 ಮೇ 2020, 13:30 IST
Last Updated 24 ಮೇ 2020, 13:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಡುಬಿದ್ರಿ: ಕೋವಿಡ್‌ ನಿಯಂತ್ರಣಕ್ಕಾಗಿ ಭಾನುವಾರ ಲಾಕ್‌ಡೌನ್ ಜಾರಿಯಲ್ಲಿದ್ದು, ಈ ವೇಳೆ ಕರಾವಳಿಯಲ್ಲಿ ಎಲ್ಲೆಡೆ ಈದುಲ್ ಫಿತ್ರ್‌ ಹಬ್ಬವನ್ನು ಮುಸ್ಲಿಮರು ಸರಳ ರೀತಿಯಲ್ಲಿ ಆಚರಿಸಿದರು. ಹಲವು ಹೊಸತನ, ಡಿಜಿಟಲ್‌ ಶೈಲಿ ಅಳವಡಿಕೆ ಕಂಡುಬಂತು.

ಈ ಭಾರಿಯ ಹಬ್ಬವು ಹಲವು ಹೊಸತನಕ್ಕೆ ಸಾಕ್ಷಿಯಾಯಿತು. ಮಸೀದಿಗೆ ತೆರಳದೆ ಮನೆಯಲ್ಲಿ ಈದ್ ನಮಾಜನ್ನು ಕುಟುಂಬಸ್ಥರೊಂದಿಗೆ ನೆರವೇರಿಸಿದರು. ಹಬ್ಬದ ಪ್ರಯುಕ್ತ ನಮಾಜ್‌ಗೂ ಮುನ್ನ ಬಡವರಿಗೆ ನೀಡಬೇಕಾದ ಅಕ್ಕಿಯನ್ನು ಶನಿವಾರವೇ ತಲುಪಿಸಿದ್ದಾರೆ. ಇನ್ನು ಕೆಲವರು ತಮ್ಮ ವಿವಿಧ ಕಡೆಗಳಲ್ಲಿ ಇರುವ ಕುಟುಂಬಸ್ಥರನ್ನು ಭೇಟಿಯಾಗಲು ಆಗದೆ ಝೂಮ್ ಆ್ಯಪ್ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಜನ ಹೊರಗೆ ಬಾರದೆ ಮನೆಯಲ್ಲಿಯೇ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT