
ಪ್ರಜಾವಾಣಿ ವಾರ್ತೆ
ಸ್ಫೋಟ
ಕಾರ್ಕಳ: ಪ್ರಾಣಿಗಳಿಗಾಗಿ ಇಟ್ಟ ಸ್ಫೋಟಕ ಅಗಿದು ಸಾಕು ನಾಯಿಯೊಂದು ಮುಖ, ತಲೆ ಛಿದ್ರಗೊಂಡು ಸಾವಿಗೀಡಾದ ಘಟನೆ ತಾಲ್ಲೂಕಿನ ನೀರೆ ಗ್ರಾಮದಲ್ಲಿ ನಡೆದಿದೆ.
ನೀರೆ ಗ್ರಾಮದ ನಾಟ್ಲ ದರ್ಖಾಸ್ ಮನೆಯ ನಿವಾಸಿ ರವೀಂದ್ರ ಪೂಜಾರಿ ಅವರ ಮನೆಯ ನಾಯಿ ಹೊರಗೆ ತೆರಳಿ ಹಿಂತಿರುಗಿ ಬಾರದಿದ್ದಾಗ ಹುಡುಕಲಾಯಿತು. ಹಾಡಿಯಲ್ಲಿ ನಾಯಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.