ಬ್ರಹ್ಮವರ: ಮನೆ, ಕುಟುಂಬ ವ್ಯವಸ್ಥೆಯಲ್ಲಿ ಒಗ್ಗಟ್ಟು ಇದ್ದಾಗ ಮಾತ್ರ ಸಮಾಜ ಹಾಗೂ ದೇವಸ್ಥಾನಗಳು ದೇಶದ ಒಗ್ಗಟ್ಟಿಗೆ ಶಕ್ತಿಯಾಗುತ್ತದೆ ಎಂದು ಸರಸ್ವತಿ ನಾರಾಯಣಿ ಆರ್ಯ ಮರಾಟಿ ಸೇವಾ ಸಂಘದ ಅಧ್ಯಕ್ಷ ರವಿ ನಾಯಕ್ ಮಿಯಾರು ಹೇಳಿದರು.
ಬಾರ್ಕೂರು ಮೂಡುಕೇರಿ ಸರಸ್ವತಿ ನಾರಾಯಣಿ ದೇವಸ್ಥಾನದಲ್ಲಿ ಸೋಮವಾರ ನಡೆದ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆಯ ಬಳಿಕ ಸರಸ್ವತಿ ನಾರಾಯಣಿ ಆರ್ಯ ಮರಾಟಿ ಸೇವಾ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಕ್ಷೇತ್ರದ ಸಾಧಕರಾದ ವಾಸು ನಾಯಕ್, ಗೌತಮ್, ಕೃಷ್ಣ ಕುಮಾರ್, ಪ್ರಕಾಶ ಗೋಕುಲ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ದೇವಸ್ಥಾನದ ಆಡಳಿತ ಮೋಕ್ತೇಸರ ಶಂಕರ ನಾಯಕ್ ಬ್ರಹ್ಮಾವರ, ಗೋವಿಂದ ನಾಯಕ್ ನಾಯ್ಕನ ಕಟ್ಟೆ, ಸುರೇಶ ನಾಯಕ್ ಪರ್ಕಳ, ಕರ್ನಾಟಕ ವಿದ್ಯುತ್ ನಿಗಮದ ಉದಯ ನಾಯಕ್, ನೇರಳಕಟ್ಟೆ, ಬಿ.ಎಸ್.ಎನ್.ಎಲ್‌ನ ನಿವೃತ್ತ ಅಧಿಕಾರಿ ಜಯಲಕ್ಷ್ಮಿ ಪುರುಷೋತ್ತಮ ನಾಯಕ್ ಇದ್ದರು.
ಚಂದ್ರಶೇಖರ ನಾಯಕ್ ಮಣಿಪಾಲ ಸ್ವಾಗತಿಸಿದರು. ಶ್ರೀನಿವಾಸ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಂತ ಬೆಳ್ವೆ ವಂದಿಸಿದರು. ಶಿಕ್ಷಕರಾದ ಸುಧಾಕರ ನಾಯಕ್ ಗೋಳಿಯಂಗಡಿ ಮತ್ತು ನಾಗರತ್ನ ಪಳ್ಳಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.