ADVERTISEMENT

ಉಡುಪಿ | 15 ಮಂದಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 5:02 IST
Last Updated 5 ಸೆಪ್ಟೆಂಬರ್ 2025, 5:02 IST
ಸರಸ್ವತಿ
ಸರಸ್ವತಿ   

ಉಡುಪಿ: 2025–26 ನೇ ಸಾಲಿನ ಜಿಲ್ಲಾ ಮಟ್ಟದ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳ 15 ಮಂದಿ ಶಿಕ್ಷಕರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಿರಿಯ ಪ್ರಾಥಮಿಕ: ಕುಂದಾಪುರ ತಾಲ್ಲೂಕಿನ ಮರೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸರಸ್ವತಿ, ಉಡುಪಿ ತಾಲ್ಲೂಕಿನ ಗುಡ್ಡೆಯಂಗಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ವಸುಂಧರ, ಕಾರ್ಕಳ ತಾಲ್ಲೂಕಿನ ಪಡುಕುಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹರೀಶ್‌ ಪೂಜಾರಿ, ಬೈಂದೂರು ವಲಯದ ಕಿಸ್ಮತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುಮಂಗಲಾ ಗಾಣಿಗ, ಬ್ರಹ್ಮಾವರ ತಾಲ್ಲೂಕಿನ ಅಚ್ಲಾಡಿ ಮೂಡುಕೆರೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ವಿಜಯಾ ಎ.

ಹಿರಿಯ ಪ್ರಾಥಮಿಕ: ಕುಂದಾಪುರ ತಾಲ್ಲೂಕಿನ ಹೆಸ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶೇಖರ ಕುಮಾರ, ಬ್ರಹ್ಮಾವರ ತಾಲ್ಲೂಕಿನ ಹಂಗಾರಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ವೀಣಾ, ಉಡುಪಿ ತಾಲ್ಲೂಕಿನ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರಮಣಿ, ಬೈಂದೂರು ವಲಯ ಕಂಚಿಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ತಿಮ್ಮಪ್ಪ ಗಾಣಿಗ, ಕಾರ್ಕಳ ತಾಲ್ಲೂಕಿನ ಕೂಡಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಚ್‌. ಪ್ರಭಾವತಿ.

ADVERTISEMENT

ಪ್ರೌಢಶಾಲಾ ವಿಭಾಗ: ಕಾರ್ಕಳ ತಾಲ್ಲೂಕಿನ ಬಜಗೋಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಸಹ ಶಿಕ್ಷಕ ಶಶಿಶಂಕರ್‌ ಎಚ್‌.ಎಂ., ಉಡುಪಿ ತಾಲ್ಲೂಕಿನ ಇನ್ನಂಜೆ ಎಸ್‌.ವಿ.ಎಚ್‌. ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಶಿಕ್ಷಕ ಎ. ನಟರಾಜ ಉಪಾಧ್ಯ, ಬ್ರಹ್ಮಾವರ ತಾಲ್ಲೂಕಿನ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ ಕೆ., ಕುಂದಾಪುರ ತಾಲ್ಲೂಕಿನ ಕಂಡ್ಲೂರು ರಾಮ್ಸನ್‌ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಸಂತೋಷ, ಬೈಂದೂರು ವಲಯದ ಹೆಮ್ಮಾಡಿ ಜನತಾ ಪ್ರೌಢ ಶಾಲೆಯ ಸಹ ಶಿಕ್ಷಕ ಜಗದೀಶ ಶೆಟ್ಟಿ.

ವಸುಂಧರ
ಹರೀಶ್‌ ಪೂಜಾರಿ
ಸುಮಂಗಲಾ ಗಾಣಿಗ
ವಿಜಯಾ
ಶೇಖರ ಕುಮಾರ
ವೀಣಾ 
ರಮಣಿ
ತಿಮ್ಮಪ್ಪ ಗಾಣಿಗ
ಪ್ರಭಾವತಿ
ಶಶಿಶಂಕರ್‌
ನಟರಾಜ ಉಪಾಧ್ಯ
ಜಗದೀಶ ಕೆ.
ಸಂತೋಷ್‌
ಜಗದೀಶ ಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.