ಹೆಬ್ರಿ: ಅಮೃತಭಾರತಿ ಮಾತೃ ಮಂಡಳಿ ವತಿಯಿಂದ ಮಾತೆಯರಿಗೆ ಹಾಗೂ ಸಾರ್ವಜನಿಕರಿಗೆ ನೀಡಿದ ಗೋಗ್ರಾಸ ನಿಧಿ ಹುಂಡಿಯಲ್ಲಿ ಸಂಗ್ರಹವಾದ ₹38,500 ಹಣವನ್ನು ಕಾರ್ತಿಕ ಮಾಸದ ಸಂದರ್ಭದಲ್ಲಿ ಹೆಬ್ರಿ ಗಿಲ್ಲಾಳಿ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆಯ ಪ್ರಮುಖರಾದ ವಿದ್ವಾನ್ ಪದ್ಮನಾಭ ಆಚಾರ್ ಅವರಿಗೆ ನೀಡಲಾಯಿತು.
ಮಾತೃಮಂಡಳಿ ಅಧ್ಯಕ್ಷೆ ವೀಣಾ ಆರ್ ಭಟ್, ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್, ಶಿಕ್ಷಕಿ ವಿಮಲಾ ಭಂಡಾರಿ, ನಂದಿತಾ ಕಾಮತ್, ಗಗನ, ಶೃತಿ, ಶೋಭಾ ನಾಯಕ್, ಆಶಾಲತಾ, ಸುಧಾ ಭಟ್, ಅಶ್ವಿನಿ, ಲಲಿತಾ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.