ADVERTISEMENT

ಕೈರಂಪಳಿ ಬಲೆಗೆ ಬಿದ್ದ ರಾಶಿ ಪಾಂಪ್ಲೆಟ್‌

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 14:39 IST
Last Updated 4 ಸೆಪ್ಟೆಂಬರ್ 2021, 14:39 IST
ಮಲ್ಪೆಯ ತೊಟ್ಟಂನಲ್ಲಿ ಕೈರಂಪಳಿ ಬಲೆಗೆ ಬಿದ್ದ ಪಾಂಪ್ಲೆಂಟ್ ಮೀನು
ಮಲ್ಪೆಯ ತೊಟ್ಟಂನಲ್ಲಿ ಕೈರಂಪಳಿ ಬಲೆಗೆ ಬಿದ್ದ ಪಾಂಪ್ಲೆಂಟ್ ಮೀನು   

ಉಡುಪಿ: ಮಲ್ಪೆಯ ತೊಟ್ಟಂ ಬಳಿಯ ಸಮುದ್ರದಲ್ಲಿ ಮೀನುಗಾರರ ಬಲೆಗೆ ಭರ್ಜರಿ ಮೀನಿನ ಬೇಟೆ ಸಿಕ್ಕಿದೆ. ಆಳ ಸಮುದ್ರದಲ್ಲಿ ಹೆಚ್ಚಾಗಿ ಕಾಣಸಿಗುವ ಬಹುಬೇಡಿಕೆಯ ಪಾಂಪ್ಲೆಟ್‌ ಮೀನುಗಳು ಸಮುದ್ರದ ದಡದಲ್ಲಿಯೇ ರಾಶಿ ರಾಶಿಯಾಗಿ ಸಿಕ್ಕಿವೆ.

ಸಾಂಪ್ರದಾಯಿಕ ಕೈರಂಪಳಿ ಬಲೆಗೆ ಬಿದ್ದಿದ್ದ ಮೀನುಗಳನ್ನು ಮೀನುಗಾರರೆಲ್ಲ ಒಟ್ಟಾಗಿ ಸೇರಿ ತಡಕ್ಕೆ ಎಳೆದು ತಂದರು. ಬಳಿಕ ಮೀನುಗಳನ್ನು ಬುಟ್ಟಿಗೆ ತುಂಬಿಸಿಕೊಂಡು ಬಂದರಿಗೆ ಸಾಗಿಸಿದರು.

ಬಲೆಗೆ ಮೀನಿನ ರಾಶಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸ್ಥಳೀಯರು ತೀರದಲ್ಲಿ ಜಮಾಯಿಸಿದ್ದರು. ಉಡುಪಿ ಹಾಗೂ ಸುತ್ತಮುತ್ತಲಿನ ಭಾಗಗಳ ಗ್ರಾಹಕರು ಬಂದು ಮೀನು ಖರೀದಿಸಿದರು.

ADVERTISEMENT

ದುಬಾರಿ ಬೆಲೆಯ ಪಾಂಪ್ಲೆಟ್‌ ಮೀನುಗಳು ಮಲ್ಪೆ ಬಂದರಿನಲ್ಲಿ ಲಕ್ಷಾಂತರ ರೂಪಾಯಿಗೆ ಮಾರಾಟವಾಗಿದ್ದು, ಮೀನುಗಾರರಿಗೆ ಬಂಪರ್ ಬೆಲೆ ಸಿಕ್ಕಿದೆ. ಸಾಮಾನ್ಯವಾಗಿ ಕೈರಂಪಳಿ ಬಲೆಗೆ ಪಾಂಪ್ಲೆಟ್‌ ಮೀನುಗಳು ಸಿಗುವುದು ಬಹಳ ಅಪರೂಪ ಎನ್ನುತ್ತಾರೆ ಮೀನುಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.