
ಪ್ರಜಾವಾಣಿ ವಾರ್ತೆ
ಬೈಂದೂರು: ಅರಣ್ಯ, ಕಂದಾಯ ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಜೊತೆ ಶಾಸಕ ಗುರುರಾಜ್ ಗಂಟಿಹೊಳೆ ಈಚೆಗೆ ಸಭೆ ನಡೆಸಿದರು.
ಅಭಿವೃದ್ಧಿ ಯೋಜನೆಗೆ ನಿರಾಕ್ಷೇಪಣೆ ಪಡೆಯಲು ಅವಕಾಶವಿದ್ದರೂ ಮಾಹಿತಿ ಕೊರತೆಯಿಂದ ಯೋಜನೆಗಳು ನನೆಗುದಿಗೆ ಬೀಳುವ ಸಂಭವ ಇರುವುದರಿಂದ ಅರಣ್ಯ ಅದಾಲತ್‌ನಲ್ಲಿ ಮಾದರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಶಾಸಕರು ಹೇಳಿದರು.
ರಾಷ್ಟೀಯ ಹೆದ್ದಾರಿ 766ಸಿ ಭೂ ಸ್ವಾದೀನ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದ್ದು ಹಾಗೂ 419 ಜನರಿಗೆ ಭೂ ಪರಿಹಾರ ಒದಗಿಸಲು ಕ್ರಮವಾಗಿದೆ. ಉಳಿದಿರುವ 88 ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಸೂಚಿಸಲಾಗಿದ ಎಂದು ಅವರು ಹೇಳಿದರು. ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಭೂದಾಖಲೆಗಳ ಉಪನಿರ್ದೇಶಕ ರವೀಂದ್ರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.