ADVERTISEMENT

ಫ್ರೆಂಡ್ಸ್‌ ಗಾರ್ಡನ್‌ ಸಮಿತಿ: 25ನೇ ಗಣೇಶೋತ್ಸವ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 14:41 IST
Last Updated 30 ಆಗಸ್ಟ್ 2019, 14:41 IST

ಉಡುಪಿ: ಉದ್ಯಾವರದ ಫ್ರೆಂಡ್ಸ್‌ ಗಾರ್ಡನ್‌ ಸಾರ್ವಜನಿಕ ಬಾಲ ಗಣೇಶೋತ್ಸವ ಸಮಿತಿಯ 25ನೇ ವರ್ಷದ ಗಣೇಶೋತ್ಸವ ಸೆ.2ರಿಂದ 4ರವರೆಗೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಯೋಗೀಶ್‌ ಎಸ್‌. ಕೋಟ್ಯಾನ್‌ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2ರಂದು ಬೆಳಿಗ್ಗೆ 10.30ಕ್ಕೆ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುವುದು. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 8ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ವೈ.ಎನ್‌.ಶೆಟ್ಟಿ ರಜತ ಮಹೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ರಾತ್ರಿ 9ಕ್ಕೆ ಹೇರಂಜೆ ಯಕ್ಷ ಬಳಗದಿಂದ ಪೌರಾಣಿಕ ಯಕ್ಷಗಾನ ‘ಕುಶಲವ’ ಪ್ರದರ್ಶನಗೊಳ್ಳಲಿದೆ ಎಂದರು.

3ರಂದು ಬೆಳಿಗ್ಗೆ 9.30ಕ್ಕೆ 108 ತೆಂಗಿನಕಾಯಿ ಗಣಪತಿ ಹೋಮ, 12.30ಕ್ಕೆ ಭಕ್ತಿ ಸುಗಮ ಸಂಗೀತ ಹಾಗೂ ರಾತ್ರಿ 9ಕ್ಕೆ ನಮ್ಮ ಕಲಾವಿದೆರ್‌ ಬೆದ್ರ ತಂಡದಿಂದ ‘ಉಲಾಯಿ ಪಿದಾಯಿ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ADVERTISEMENT

4ರಂದು ಬೆಳಿಗ್ಗೆ 10ಕ್ಕೆ ಉಚಿತ ಆರೋಗ್ಯ ತಪಾಸಣೆ ಹಾಗೂ 3.45ಕ್ಕೆ ವಿಗ್ರಹದ ವಿಸರ್ಜನಾ ಮೆರವಣಿಗೆ ಆರೂರುತೋಟ ಅಶ್ವಥ ಕಟ್ಟೆಯಿಂದ ಹೊರಟು ಸಂಪಿಗೆ ನಗರ, ಗುಡ್ಡೆಯಂಗಡಿ, ಮೇಲ್ಪೆಟೆ, ಮಠದಂಗಡಿ ಮಾರ್ಗವಾಗಿ ಶಾಂತಿನಗರದ ಮೂಲಕ ಸಿದ್ಧಿವಿನಾಯಕ ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್‌ ಸುವರ್ಣ, ಸುಧಾಕರ ಕೋಟ್ಯಾನ್‌, ಹರೀಶ್‌ ಉದ್ಯಾವರ, ಜಿ. ಪ್ರಭಾಕರ, ದಿನೇಶ್‌ ಜತ್ತನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.