ಬ್ರಹ್ಮಾವರ: ಚಾತುರ್ಮಾಸ್ಯ ವ್ರತದ ಪೂರ್ವಾಂಗದ ಸಲುವಾಗಿ ಎಡನೀರು ಮಠದ ಸಚ್ಚಿದಾನಂದ ಭಾರತಿತೀರ್ಥ ಸ್ವಾಮೀಜಿ ಅವರು ಗರಿಕೆಮಠ ಅರ್ಕಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿದರು.
ಈ ಸಂದರ್ಭ ವರದಳ್ಳಿಯ ಶ್ರೀಧರ ಆಶ್ರಮದ ಶ್ರೀಧರ ಸ್ವಾಮಿಗಳ ನಿರ್ಗುಣ ಪಾದುಕಾಪೂಜೆ ನೆರವೇರಿತು. ಶ್ರೀಗಳು ಅರ್ಕಗಣಪತಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಅರ್ಕಗಣಪತಿ ಕ್ಷೇತ್ರದ ಮುಖ್ಯಸ್ಥ ಜಿ. ರಾಮಪ್ರಸಾದ ಅಡಿಗ, ಭಕ್ತರು, ಅರ್ಚಕರು ಪಾಲ್ಗೊಂಡಿದ್ದರು.
ಎಡನೀರು ಮಠದ ಶ್ರೀಗಳು ಪ್ರತಿವರ್ಷ ಚಾತುರ್ಮಾಸ್ಯ ವ್ರತದ ಪೂರ್ವದಲ್ಲಿ ಅರ್ಕಗಣಪತಿಯ ದರ್ಶನ ಪಡೆದು ಬಳಿಕ ಇತರ ಪವಿತ್ರ ಕ್ಷೇತ್ರಗಳನ್ನು ಸಂದರ್ಶನ ಮಾಡಿ ಪೂಜೆ ಸಲ್ಲಿಸುವುದು ವಾಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.