ಉಡುಪಿ: ಹವ್ಯಕ ಸಭಾ ಉಡುಪಿ ವತಿಯಿಂದ ನಗರದ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸವಿತಾ ಕೆ. ಭಟ್ಟ ಅವರ ಪ್ರವಾಸ ಕಥನ ‘ಜರ್ಮನಿಯ ನೆಲದಲ್ಲಿ’ ಕೃತಿ ಲೋಕಾರ್ಪಣೆಗೊಂಡಿತು.
ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ ಕೃತಿ ಬಿಡುಗಡೆಗೊಳಿಸಿದರು. ವಿದ್ವಾಂಸ ಪಾದೆಕಲ್ಲು ವಿಷ್ಣು ಭಟ್ಟ ಅವರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಗಣಪತಿ ಭಟ್ಟ ವರ್ಗಾಸರ ಅವರು ಕೃತಿಯನ್ನು ಪರಿಚಯಿಸಿದರು. ಮಹೇಂದ್ರ ಎನ್. ಶರ್ಮಾ ಉಪಸ್ಥಿತರಿದ್ದರು. ಸವಿತಾ ಭಟ್ಟ ಸ್ವಾಗತಿಸಿದರು. ಕೆ. ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಿದರು. ಎಸ್. ಜಿ. ಭಾಗವತ್ ವಂದಿಸಿದರು.
ಸ್ವಚ್ಛತೆ ಕುರಿತು ಉಪನ್ಯಾಸ
ಶಿರ್ವ: ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ ಅಂದಗೊಳಿಸುವಿಕೆ ಮತ್ತು ಸ್ವಯಂ ಪ್ರಸ್ತುತಿಯು ಆತ್ಮವಿಶ್ವಾಸ ಮತ್ತು ಯಶಸ್ಸಿನ ಕೀಲಿಕೈ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು.
ಮಂಗಳೂರಿನ ಕಾರ್ತಿಕ್ ಆಳ್ವ ಮಾತನಾಡಿ, ಹೇಗೆ ಕಾಣುತ್ತೇವೆ, ಹೇಗೆ ಮಾತನಾಡುತ್ತೇವೆ ಮತ್ತು ನಮ್ಮನ್ನು ಹೇಗೆ ಪರಿಚಯಿಸಿಕೊಳ್ಳುತ್ತೇವೆ ಎಂಬುದು ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದರು.
ಸ್ವಯಂ ಪರಿಚಯ ಮಾಡಿಕೊಳ್ಳುವಾಗ ಪ್ರಸ್ತುತ ಚಟುವಟಿಕೆಗಳು, ಅನುಭವ ಮತ್ತು ಕೌಶಲಗಳು, ಆಕಾಂಕ್ಷೆ ಮತ್ತು ಗುರಿಗಳನ್ನು ಉಲ್ಲೇಖಿಸಬೇಕು. ಸ್ವಚ್ಛತೆ ಎಂದರೆ ಬಾಹ್ಯ ಸ್ವಚ್ಛತೆ ಅಷ್ಟೆ ಅಲ್ಲ, ಉಡುಪು, ದೇಹ ಭಾಷೆಯೂ ಒಳಗೊಂಡದ್ದು ಎಂದರು. ಎಂಬಿಎ ವಿಭಾಗದ ನಿರ್ದೇಶಕ ಸೂರಜ್ ಫ್ರಾನ್ಸಿಸ್ ನೊರೋನ್ಹ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.