ADVERTISEMENT

ಪ್ರೊ.ಅ.ಸುಂದರ ಅವರಿಗೆ ಗೋವಿಂದ ಪೈ ಪ್ರಶಸ್ತಿ

23ರಂದು ಎಂಜಿಎಂ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 14:01 IST
Last Updated 13 ಮಾರ್ಚ್ 2020, 14:01 IST
ಪ್ರೊ.ಅ.ಸುಂದರ
ಪ್ರೊ.ಅ.ಸುಂದರ   

ಉಡುಪಿ: ಪ್ರಸಕ್ತ ಸಾಲಿನರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಹಿರಿಯ ಪುರಾತತ್ವ ಶಾಸ್ತ್ರಜ್ಞ ಹಾಗೂ ಇತಿಹಾಸಕಾರ ಪ್ರೊ.ಅ.ಸುಂದರ ಅವರಿಗೆ ಸಂದಿದೆ.

ಮಾರ್ಚ್ 23ರಂದು ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಗೃಹದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ತಿಳಿಸಿದ್ದಾರೆ.

ಮಣಿಪಾಲ ಗ್ಲೋಬಲ್‌ ಸಂಸ್ಥೆ ಮುಖ್ಯಸ್ಥ ಟಿ.ವಿ. ಮೋಹನದಾಸ ಪೈ ಅವರು ತಾಯಿ ವಿಮಲಾ ಪೈ ಹೆಸರಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿಯು ₹ 1 ಲಕ್ಷ ಒಳಗೊಂಡಿದೆ.

ADVERTISEMENT

ಉಡುಪಿ ಸಮೀಪದ ನೀಲಾವರದ ಪ್ರೊ.ಅ.ಸುಂದರ ಪುರಾತತ್ವ ಇಲಾಖೆಯಲ್ಲಿ ಬಹುಕಾಲ ದುಡಿದಿದ್ದು, ಧಾರವಾಡದ ಕರ್ನಾಟಕ ವಿವಿ ಪ್ರಾಚೀನ ಭಾರತೀಯ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಬಿಜಾಪುರದ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾಗಿ, ಮೈಸೂರು ವಿ.ವಿಯ ಝಾಕಿರ್ ಹುಸೇನ್ ಪೀಠದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಹಲವು ಉತ್ಖನನಗಳನ್ನು ನಡೆಸಿದ್ದು, ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ ಮುತುವರ್ಜಿ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.