ADVERTISEMENT

ಧಾರ್ಮಿಕ ಚಿಹ್ನೆಗಳನ್ನು ತೆಗೆಸಿದ ಆರೋಪ: ಅತಿಥಿ ಶಿಕ್ಷಕ ವಜಾ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 7:18 IST
Last Updated 18 ನವೆಂಬರ್ 2025, 7:18 IST
Venugopala K.
   Venugopala K.

ಕಾರ್ಕಳ (ಉಡುಪಿ): ವಿದ್ಯಾರ್ಥಿಗಳು ಧರಿಸುತ್ತಿದ್ದ ಧಾರ್ಮಿಕ ಚಿಹ್ನೆಗಳನ್ನು ತೆಗೆಸಿದ ಆರೋಪದಲ್ಲಿ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅತಿಥಿ ಶಿಕ್ಷಕರೊಬ್ಬರನ್ನು ವಜಾಗೊಳಿಸಲಾಗಿದೆ.

ಅತಿಥಿ ದೈಹಿಕ ಶಿಕ್ಷಣ ಶಿಕ್ಷಕ ಕಲಬುರಗಿಯ ಮದರಶಾ ಎಸ್. ಮಕಂದಾರ ವಜಾಗೊಂಡವರು. ತಾತ್ಕಾಲಿಕ ನೆಲೆಯಲ್ಲಿ ಇವರನ್ನು ನೇಮಕ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಸಣ್ಣ ವಿದ್ಯಾರ್ಥಿಗಳಿಗೆ ಅನಿಯಮಿತವಾಗಿ ಬಸ್ಕಿ ಹೊಡೆಸುವುದು, ಜನಿವಾರ ಮತ್ತು ಕೈಗೆ ಕಟ್ಟಿರುವ ದಾರ ತೆಗೆಯುವಂತೆ
ಇವರು ಸೂಚಿಸುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.

ADVERTISEMENT

ಕೆಲ ತಿಂಗಳ ಹಿಂದೆ ಶಿಕ್ಷಕ, ವಿದ್ಯಾರ್ಥಿಗಳ ಧಾರ್ಮಿಕ ಚಿಹ್ನೆಗಳನ್ನು ತೆಗೆಯಲು ಸೂಚಿಸಿರುವುದಾಗಿ ದೂರುಗಳು ಬಂದಿದ್ದವು, ಈಗ ಪೋಷಕರು ಆರೋಪ ಮಾಡಿದ ಕಾರಣಕ್ಕೆ ಅವರನ್ನು ವಜಾಗೊಳಿಸಲಾಗಿದೆ ಎಂದು ಶಾಲೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.