ಉಡುಪಿ: ನಗರ ಠಾಣಾ ವ್ಯಾಪ್ತಿಯಲ್ಲಿ ಕಳವಾಗಿದ್ದ ಮೊಬೈಲ್‌ಗಳನ್ನು ಪೊಲೀಸರು ಪತ್ತೆಹಚ್ಚಿ ಅವುಗಳ ವಾರೀಸುದಾರರಿಗೆ ಗುರುವಾರ ಹಸ್ತಾಂತರಿಸಿದರು.
ನಗರ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ, ಮೊಬೈಲ್ ಕಳವಾದಾಗ ಚಿಂತಿಸಬೇಕಿಲ್ಲ. ಮೊಬೈಲ್ ಅನ್ನು ಪತ್ತೆಹಚ್ಚುವ ಅತ್ಯಾಧುನಿಕ ತಂತ್ರಜ್ಞಾನವನ್ನು ಇಲಾಖೆ ಅಭಿವೃದ್ಧಿ ಪಡಿಸಿದೆ ಎಂದರು.
ನಗರ ಠಾಣಾ ಪೋಲಿಸ್ ನಿರೀಕ್ಷಕ ಶ್ರೀಧರ್, ಪಿಎಸ್ಐಗಳಾದ ಈರಣ್ಣ, ಭರತೇಶ್, ಸಿಬ್ಬಂದಿ ಚೇತನ್, ಬಶೀರ್, ವಿನಯ್, ಜಸ್ವ, ಗಂಗರಾಜ್ ಇದ್ದರು. ಸುಮಾರು 30 ಮಂದಿ ಠಾಣೆಯಿಂದ ಮೊಬೈಲ್‌ಗಳನ್ನು ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.