ಹೆಬ್ರಿ: ಹೆಬ್ರಿಯ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಹಶೀಲ್ದಾರ್‌ಗೆ ಜೆಡಿಎಸ್ ಮುಖಂಡು ಕುಚ್ಚೂರು ಶ್ರೀಕಾಂತ್ ಪೂಜಾರಿ ಬುಧವಾರ ಮನವಿ ಸಲ್ಲಿಸಿದರು.
ಹೆಬ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 169ಎ ಕಾಮಗಾರಿ ನಡೆಯುತ್ತಿದ್ದು ಅರಣ್ಯ ಇಲಾಖೆಯ ತೊಡಕಿನಿಂದಾಗಿ ಕೆಲವೆಡೆ ಕಾಮಗಾರಿ ವಿಳಂಬವಾಗುತ್ತಿದೆ. ಇದರಿಂದ ಹೆಬ್ರಿ ಸರ್ಕಲ್‌ನಲ್ಲಿ ದಿನನಿತ್ಯ ವಾಹನ ಸವಾರರಿಗೆ, ಪಾದಚಾರಿಗಳಿಗೆ ವಿಶೇಷವಾಗಿ ಶಾಲಾ ಮಕ್ಕಳಿಗೆ ಕಿರಿಕಿರಿಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಶಿವಮೊಗ್ಗ–ಹೆಬ್ರಿ–ಮಣಿಪಾಲ–ಉಡುಪಿ ಭಾಗದಲ್ಲಿ ವಿಪರೀತ ವಾಹನಗಳ ಓಡಾಟವಿದ್ದು ಹೆಬ್ರಿಯ ವೃತ್ತಗಳಲ್ಲಿ ಪ್ರತಿದಿನವೂ ಟ್ರಾಫಿಕ್ ಜಾಮ್ ಆಗುತ್ತಿದೆ. ಆದ್ದರಿಂದ ಹೆಬ್ರಿ ಕೆಳಪೇಟೆಯಿಂದ ಬಂಟರ ಭವನದ ವರೆಗೆ ಚತುಷ್ಪಥ ಹೆದ್ದಾರಿಯ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಶ್ರೀಕಾಂತ್ ಪೂಜಾರಿ ಒತ್ತಾಯಿಸಿದ್ದಾರೆ.
ಕಲಾಕೇಂದ್ರದಲ್ಲಿ ಇಂದು, ನಾಳೆ ಯಕ್ಷಗಾನ
ಬ್ರಹ್ಮಾವರ: ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಹಾಲಾಡಿಯ ಮಯ್ಯ ಯಕ್ಷಬಳಗ ಸಹಯೋಗದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಇದೇ 21ರಂದು ಯಕ್ಷಗಾನ ಭೀಷ್ಮ ವಿಜಯ ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಸಂಜೆ 6ಕ್ಕೆ ನಡೆಯಲಿದೆ.
22ರಂದು ಸಂಜೆ 6ಕ್ಕೆ ತ್ರಿಕೂಟ ಯಕ್ಷ ಸಂಭ್ರಮದಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಿಂದ ಅನುಸಾಲ್ವ ಗರ್ವಭಂಗ ಯಕ್ಷಗಾನ ನಡೆಯಲಿದೆ. ಕಲಾವಿದರಾದ ಗಜೇಂದ್ರ ಶೆಟ್ಟಿ, ಕೇಶವ ಆಚಾರ್, ಗಣೇಶ ಚೇರ್ಕಾಡಿ, ವಾಗ್ವಿಲಾಸ ಭಟ್ಟ, ರಾಮ ಬಾರಿ, ಶ್ರೀಕಾಂತ ಭಟ್ಟ, ಸೀತಾರಾಮ ಸೋಮಯಾಜಿ, ಪ್ರಶಾಂತ ಮಯ್ಯ, ವೈಕುಂಠ ಹೇರ್ಳೆ, ವಿನಯಕುಮಾರ, ಅಶೋಕ ಆಚಾರ್, ಸೃಜನ್ ಗುಂಡ್ಮಿ ಭಾಗವಹಿಸಲಿದ್ದಾರೆ ಎಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.