ADVERTISEMENT

ಹೆಬ್ರಿ: 72ನೇ ಅಖಿಲ ಭಾರತ ಸಹಕಾರಿ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 7:20 IST
Last Updated 21 ನವೆಂಬರ್ 2025, 7:20 IST
ಹೆಬ್ರಿಯ ಬಂಟರ ಭವನದಲ್ಲಿ ಬುಧವಾರ ನಡೆದ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು
ಹೆಬ್ರಿಯ ಬಂಟರ ಭವನದಲ್ಲಿ ಬುಧವಾರ ನಡೆದ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು   

‌ಹೆಬ್ರಿ: ಕರ್ನಾಟಕ ರಾಜ್ಯ ಸಹಕಾರ ಮಂಡಲ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಜಿಲ್ಲಾ ಸಹಕಾರ ಇಲಾಖೆಯ ಆಶಯದಲ್ಲಿ ‘72ನೇ ಅಖಿಲ ಭಾರತ ಸಹಕಾರ ಸಪ್ತಾಹ’ ಹೆಬ್ರಿಯ ಬಂಟರ ಭವನದಲ್ಲಿ ಬುಧವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ‘ಸಹಕಾರಿ ಕ್ಷೇತ್ರವು ಹುಟ್ಟಿದ ಮಗುವಿನ ತೊಟ್ಟಿಲಿನಿಂದ ಹಿಡಿದು, ಸತ್ತಾಗ ಸ್ಮಶಾನಕ್ಕೆ ಹೋಗುವ ವ್ಯವಸ್ಥೆ ತನಕ ಆವರಿಸಿದೆ. ಪ್ರಾಮಾಣಿಕವಾದ ಸೇವೆ ಸಹಕಾರಿ ಸಂಘಗಳಿಂದ ಸಿಗುತ್ತಿದ್ದು, ಇದು ಜನರ ನಂಬಿಕೆ ಉಳಿಸಿಕೊಂಡು ಜನ ಮನ್ನಣೆ ಪಡೆದಿದೆ’ ಎಂದರು.

ದಕ್ಷಿಣ ಕನ್ನಡ ಹಾಲು ಒಕ್ಕೂಟದ ರವಿರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ರಾಜೇಂದ್ರ ಭಟ್ ಕೆ. ದಿಕ್ಸೂಚಿ ಭಾಷಣ ಮಾಡಿದರು. ಕಡಾರಿ ರವೀಂದ್ರ ಪ್ರಭು ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಉದಯ ಕೃಷ್ಣಯ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಎಸ್. ಬಂಗೇರ, ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಕುಮಾರ್ ಶೆಟ್ಟಿ, ವಲಯ ಮೇಲ್ವಿಚಾರಕ ಜಯಂತ್ ಕುಮಾರ್, ಸಿಇಒ ಶೀನ ನಾಯ್ಕ್, ಪ್ರಮುಖರಾದ ಗಂಗಾಧರ ಶೆಟ್ಟಿ, ಅಶೋಕ್ ಕುಮಾರ್ ಬಲ್ಲಾಳ್, ಸುಧೀರ್ ಕುಮಾರ್, ಅನಿಲ್ ಪೂಜಾರಿ, ಕಡಾರಿ ರವೀಂದ್ರ ಪ್ರಭು, ಲಕ್ಷ್ಮಣ ಆಚಾರ್ಯ ವರಂಗ, ಹಿರಿಯಣ್ಣ ಶೆಟ್ಟಿ, ನವೀನ್ ನಾಯಕ್, ಕೃಷ್ಣ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಅನುಷ ಕೋಟ್ಯಾನ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಬಿ. ಕರುಣಾಕರ ಶೆಟ್ಟಿ, ಅಮೃತ್ ಕುಮಾರ್ ಶೆಟ್ಟಿ, ದಯಾನಂದ ಶೆಟ್ಟಿ, ಮಹೇಶ್ ಶೆಟ್ಟಿ ಕಾನ್ಬೆಟ್ಟು, ಪುಟ್ಟಣ್ಣ ಭಟ್, ಜಗನ್ನಾಥ ಕುಲಾಲ್, ಸುಧಾ ಜಿ. ನಾಯಕ್, ವೀಣಾ ವಿ. ಪ್ರಭು, ಕೆ.ದೇವು, ರಾಘವೇಂದ್ರ ನಾಯ್ಕ್ ಇದ್ದರು.

ಶಿಕ್ಷಕ ಪ್ರಕಾಶ ಪೂಜಾರಿ ಮಾತಿಬೆಟ್ಟು ನಿರೂಪಿಸಿದರು. ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ನವೀನ್ ಕೆ. ಅಡ್ಯಂತಾಯ  ಸ್ವಾಗತಿಸಿದರು. ಉಪಾಧ್ಯಕ್ಷ ಬಿ. ಹರೀಶ್ ಪೂಜಾರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.