ಹೆಬ್ರಿ: ದೇಶಕ್ಕಾಗಿ ಬಲಿದಾನ ನೀಡಿದ ಹುತಾತ್ಮರನ್ನು, ಸರ್ವಸ್ವವನ್ನು ದೇಶಕ್ಕೆ ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕು, ಗೌರವ ಸಲ್ಲಿಸಬೇಕು. ದೇಶ ಕಟ್ಟುವ ಕಾಯಕ ನಮ್ಮ ಧ್ಯೇಯವಾಗಿರಲಿ ಎಂದು ಕರ್ಣಾಟಕ ಬ್ಯಾಂಕ್ ಮೆನೇಜರ್ ಗಣೇಶ ನಾಯಕ್ ಹೇಳಿದರು.
ಅವರು ಇಲ್ಲಿನ ಪಾಂಡುರಂಗ ರಮಣ ನಾಯಕ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಮಾಡಿ ಮಾತನಾಡಿದರು.
ಅಮೃತಭಾರತಿ ಟ್ರಸ್ಟ್ ಅಧ್ಯಕ್ಷ ಎಂ. ರವಿರಾವ್, ಕಾರ್ಯದರ್ಶಿ ಗುರುದಾಸ ಶೆಣೈ, ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ, ಕಾಲೇಜು ಅಧ್ಯಕ್ಷ ರಾಜೇಶ ನಾಯಕ್, ಟ್ರಸ್ಟ್ ಸದಸ್ಯರಾದ ಬಾಲಕೃಷ್ಣ ಮಲ್ಯ, ಭಾಸ್ಕರ್ ಜೋಯಿಸ್, ಸುಧೀರ್ ನಾಯಕ್, ವಸತಿ ನಿಲಯದ ಗೌರವಾಧ್ಯಕ್ಷ ಯೋಗೀಶ್ ಭಟ್, ಸದಸ್ಯ ರಾಮಕೃಷ್ಣ ಆಚಾರ್ಯ, ಕರ್ಣಾಟಕ ಬ್ಯಾಂಕ್ ಹೆಬ್ರಿ ಅಸಿಸ್ಟೆಂಟ್ ಮೆನೇಜರ್ ಸುಮಂತ್, ಧಾಮಿನಿ, ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಅರುಣ್ ಎಚ್.ವೈ, ಮುಖ್ಯಶಿಕ್ಷಕರಾದ ಅಪರ್ಣಾ ಆಚಾರ್, ಶಕುಂತಲಾ, ಅನಿತಾ, ಪಿಆರ್‌ಒ ವಿಜಯ ಕುಮಾರ್ ಶೆಟ್ಟಿ ಇದ್ದರು. ಮಹೇಶ ಹೈಕಾಡಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.