ADVERTISEMENT

ಉಡುಪಿ | ಬೈಕ್– ಶಾಲಾ ಬಸ್ ಡಿಕ್ಕಿ: ಸವಾರ ಮೃತ್ಯು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:06 IST
Last Updated 8 ಸೆಪ್ಟೆಂಬರ್ 2025, 6:06 IST
<div class="paragraphs"><p>ಅಪಘಾತ</p></div>

ಅಪಘಾತ

   

–ಪ್ರಾತಿನಿಧಿಕ ಚಿತ್ರ

ಹೆಬ್ರಿ: ಪೆರ್ಡೂರು ಗ್ರಾಮದ ಕೊಳಂಬೆ ಕ್ರಾಸ್ ಬಳಿ ಶನಿವಾರ ಇಲ್ಲಿನ ಖಾಸಗಿ ಶಾಲೆಯ ಬಸ್ಸೊಂದು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ADVERTISEMENT

ಮೃತಪಟ್ಟ ಬೈಕ್ ಸವಾರನನ್ನು ಗಣೇಶ್ ಎಂದು ಗುರುತಿಸಲಾಗಿದೆ. ದೊಂಡೇರಂಗಡಿ ಕಡೆಯಿಂದ ಪೆರ್ಡೂರು ಕಡೆ ಬರುತ್ತಿದ್ದ ಖಾಸಗಿ ಶಾಲೆಯ ಬಸ್ ಎದುರಿನಿಂದ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಸವಾರ ಗಣೇಶ್, ಸಹಸವಾರ ಸುದರ್ಶನ್ ಬೈಕ್ ಸಮೇತ ರಸ್ತೆಗೆ ಅಪ್ಪಳಿಸಲ್ಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಗಣೇಶ್ ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಗಾಯಗೊಂಡ ಸುದರ್ಶನ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.