
ಬ್ರಹ್ಮಾವರ: ಹೆಬ್ರಿಯಲ್ಲಿ ನೂತನವಾಗಿ ಆರಂಭಗೊಂಡ ಹೆಬ್ರಿಸಿಟಿ ಲಯನ್ಸ್ ಕ್ಲಬ್ ವತಿಯಿಂದ ನಾಲ್ಕೂರು ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ವಾಹನದ ಸಂಚಾರ ವ್ಯವಸ್ಥೆಗಾಗಿ ಲೇಡಿಸ್ ಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇದರ ಸದಸ್ಯೆಯರಾದ ಶೋಭಾ ಕೆ. ಪೂಜಾರಿ ಕಜ್ಕೆ ಮತ್ತು ಭಾರತಿ ಕಜ್ಕೆ ಕೊಡಮಾಡಿದ ಮೊತ್ತವನ್ನು ಲಯನ್ಸ್ ಸಂಸ್ಥೆ ಮೂಲಕ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ ಅವರಿಗೆ ಲಯನ್ಸ್ ಅಧ್ಯಕ್ಷ ಕೆ.ರಾಮಚಂದ್ರ ಭಟ್ ಮತ್ತು ಲೇಡೀಸ್ ಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಅಧ್ಯಕ್ಷೆ ಸುನೀತ ಹೆಬ್ಬಾರ್ ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು.
ಕಾರ್ಯದರ್ಶಿ ಬಾಲಚಂದ್ರ ಎಂ, ಲೇಡೀಸ್ ಲಯನ್ಸ್ ಕ್ಲಬ್ ಸೆಕ್ರೆಟರಿ ರಮ್ಯಕಾಂತಿ ಹಾಗೂ ಸದಸ್ಯೆಯರು ಅಧ್ಯಾಪಕ ವೃಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.