ADVERTISEMENT

ಸೇವಾ ಸಹಕಾರ ಸಂಘ: ₹ 1.15 ಕೋಟಿ ಲಾಭ

ಸದಸ್ಯರಿಗೆ ₹ 51.85 ಕೋಟಿ ಸಾಲ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 3:07 IST
Last Updated 7 ಸೆಪ್ಟೆಂಬರ್ 2022, 3:07 IST
ನವೀನ್‌ ಅಡ್ಯಂತಾಯ
ನವೀನ್‌ ಅಡ್ಯಂತಾಯ   

ಹೆಬ್ರಿ: ಇಲ್ಲಿ ಪ್ರಧಾನ ಕಚೇರಿ ಹೊಂದಿರುವ ಹೆಬ್ರಿ ವ್ಯವಸಾಯ ಸೇವಾ ಸಹಕಾರ ಸಂಘವು ಶಿವಪುರ, ಬೇಳಂಜೆ ಮತ್ತು ನಾಡ್ಪಾಲಿನಲ್ಲಿ ಪೂರ್ಣ ಪ್ರಮಾಣದ ಶಾಖೆಯನ್ನು ಹೊಂದಿದ್ದು, 2021-22ನೇ ಸಾಲಿನಲ್ಲಿ ಒಟ್ಟು ₹ 315.06 ಕೋಟಿ ವ್ಯವಹಾರ ನಡೆಸಿ, ₹ 1.15 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ನವೀನ್‌ ಕೆ ಅಡ್ಯಂತಾಯ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘವು ವರ್ಷದ ಅಂತ್ಯಕ್ಕೆ 9371 ‘ಎ’ ತರಗತಿಯ ಸದಸ್ಯರನ್ನು ಹೊಂದಿದ್ದು ಒಟ್ಟು ₹ 3.08 ಕೋಟಿ ಪಾಲು ಬಂಡವಾಳ ಮತ್ತು ₹ 50.29 ಕೋಟಿ ಠೇವಣಿ ಸಂಗ್ರ
ಹಿಸಿದೆ. ಸದಸ್ಯರಿಗೆ ₹ 51.85 ಕೋಟಿ ಸಾಲ ವಿತರಿಸಿದ್ದು, ವರ್ಷಾಂತ್ಯಕ್ಕೆ ಶೇ 93.07ರಷ್ಟು ಸಾಲ ವಸೂಲಿಯಲ್ಲಿ ಪ್ರಗತಿ ಸಾಧಿಸಿದೆ. ಸದಸ್ಯರ ಹೊರಬಾಕಿ ಸಾಲ ₹ 6.95 ಕೋಟಿ ಇದ್ದು, ಪ್ರಗತಿಯನ್ನು ಕಾಯ್ದುಕೊಂಡಿದೆ. ಸಂಘದ ಒಟ್ಟು ದುಡಿಯುವ ಬಂಡವಾಳ ₹ 78.29 ಕೋಟಿ ಆಗಿದೆ ಎಂದರು.

ರೈತ ಸದಸ್ಯರಿಗೆ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್‌ ಸಾಲವಾಗಿ ರಾಜ್ಯ ಸರ್ಕಾರದ ಶೂನ್ಯ ಬಡ್ಡಿ ಯೋಜನೆಯಲ್ಲಿ ₹ 21.37 ಕೋಟಿ ಸಾಲ, ಡೈರಿ ಕಿಸಾನ್ ಕ್ರೆಡಿಟ್ ಕಾರ್ಡ್‌ ಸಾಲವಾಗಿ ಶೂನ್ಯ ಬಡ್ಡಿ ಯೋಜನೆಯಲ್ಲಿ ₹ 66.43 ಲಕ್ಷ ಸಾಲ ಹಾಗೂ ಶೇ 3 ಬಡ್ಡಿ ದರದಲ್ಲಿ ₹ 5.32 ಕೋಟಿ ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದೆ. ಸಾಲ ವಿತರಣೆ ಪ್ರಮಾಣದಲ್ಲಿ ಶೇ 52.7 ಕೃಷಿ ಉದ್ದೇಶಕ್ಕೆ ವಿತರಿಸಲಾಗಿದೆ. ತೀರಾ ಸಂಕಷ್ಟದಲ್ಲಿ ಇರುವ ಸಾಲಗಾರ ಸದಸ್ಯರಿಗೆ ಏಕಕಂತಿನಲ್ಲಿ ಸಾಲ ಮರುಪಾವತಿಸಿ ಇನ್ನು ಮುಂದೆ ಸಾಲ ಸೌಲಭ್ಯ ಬೇಡ ಎಂದ ಸದಸ್ಯರಿಗೆ ಒಮ್ಮೊ ಮಾತ್ರ ನೀಡಬಹುದಾದ ಬಡ್ಡಿ ರಿಯಾಯತಿ ಒಟ್ಟು ₹ 9,15,107 ಮೊತ್ತ ಒದಗಿಸಿದೆ.

ADVERTISEMENT

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೀನ ನಾಯ್ಕ್‌, ಉಪಾಧ್ಯಕ್ಷ ಪುಟ್ಟಣ್ಣ ಭಟ್‌, ನಿರ್ದೇಶಕರಾದ ಕರುಣಾಕರ ಶೆಟ್ಟಿ, ಸುಧಾಕರ ಹೆಗ್ಡೆ, ಭೋಜ ಪೂಜಾರಿ, ಬಸವ ನಾಯ್ಕ್‌, ವಸಂತ ನಾಯ್ಕ್‌, ಅಮೃತ್‌ ಕುಮಾರ್‌ ಶೆಟ್ಟಿ, ಗಣೇಶ ಕುಮಾರ್‌, ಸುಮಿತ್ರಾ ಹೆಗ್ಡೆ, ಸುಧಾ ಗಣೇಶ ನಾಯಕ್‌, ಸುರೇಶ ಭಂಡಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.