ADVERTISEMENT

ತಾಣ ಬಳಿ ಗೋಪಾಲ ಭಂಡಾರಿ ಪುತ್ಥಳಿ ಸ್ಥಾಪನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:36 IST
Last Updated 28 ಏಪ್ರಿಲ್ 2025, 14:36 IST
ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿಗಳ ವೇದಿಕೆಯ ಸಭೆಯಲ್ಲಿ ವಕೀಲ ಶೇಖರ ಮಡಿವಾಳ್ ಮಾತನಾಡಿದರು
ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿಗಳ ವೇದಿಕೆಯ ಸಭೆಯಲ್ಲಿ ವಕೀಲ ಶೇಖರ ಮಡಿವಾಳ್ ಮಾತನಾಡಿದರು   

ಹೆಬ್ರಿ: ಕಾರ್ಕಳ ಕ್ಷೇತ್ರದ ಶಾಸಕರಾಗಿದ್ದ ಹೆಬ್ರಿ ಗೋಪಾಲ ಭಂಡಾರಿ ಅವರ ಶಿಲಾ ಪುತ್ಥಳಿ ಪ್ರತಿಷ್ಠಾಪನೆ, ಸಂಸ್ಮರಣ ಗ್ರಂಥ ಮತ್ತು ಅವರ ಹೆಸರಿನಲ್ಲಿ ಜನಸೇವೆ ಮಾಡಲು ಟ್ರಸ್ಟ್ ರಚನೆ ಮಾಡುವ ಕುರಿತ ಸಮಾಲೋಚನಾ ಸಭೆ ಗೋಪಾಲ ಭಂಡಾರಿ ಅಭಿಮಾನಿಗಳ ವೇದಿಕೆಯ ವತಿಯಿಂದ ಈಚೆಗೆ ನಡೆಯಿತು.

ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ ಹೆಬ್ರಿ ಮತ್ತು ಕಾರ್ಕಳ ಕ್ಷೇತ್ರಕ್ಕೆ ಶಾಶ್ವತ ಕೊಡುಗೆ ನೀಡಿದ ಗೋಪಾಲ ಭಂಡಾರಿ ಅವರ ಹೆಸರು ಶಾಶ್ವತವಾಗಿ ಜನಮಾನಸದಲ್ಲಿ ಉಳಿಯಬೇಕು, ಒಳ್ಳೆಯ ಕೆಲಸ ಮಾಡಿದರೆ ಸದಾಕಾಲ ಜನರು ಸ್ಮರಿಸುತ್ತಾರೆ ಎಂಬ ಸಂದೇಶ ಸಮಾಜಕ್ಕೆ ಹೋಗಬೇಕು ಎಂದರು.

ವಕೀಲ ಎಚ್.ಶೇಖರ ಮಡಿವಾಳ್, ಮುಖಂಡರಾದ ಮುನಿಯಾಲು ಗೋಪಿನಾಥ್ ಭಟ್, ಕಿರಣ್ ಹೆಗ್ಡೆ ಕಾರ್ಕಳ, ಮುನಿಯಾಲು ಆನಂದ ಪೂಜಾರಿ, ಅಣ್ಣಪ್ಪ ಕುಲಾಲ್ ಮಂಡಾಡಿಜಡ್ಡು, ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ ಮಾತನಾಡಿದರು.

ADVERTISEMENT

ಹೆಬ್ರಿ ಕಾರ್ಕಳ ರಾಜ್ಯ ಹೆದ್ದಾರಿಯ ತಾಣ ಅರ್ಧನಾರೀಶ್ವರ ದೇವಸ್ಥಾನದ ಎದುರಿನ ವೃತ್ತದಲ್ಲಿ ಶಿಲಾ ಪುತ್ಥಳಿ ಪ್ರತಿಷ್ಠಾಪನೆ ಮಾಡಲು ನಿರ್ಧರಿಸಲಾಯಿತು. 

ಚಾರ ಗ್ರಾಮ ಪಂಚಾಯತಿ ಅಧ್ಯಕ್ಷ ದಿನೇಶ ಶೆಟ್ಟಿ, ವಿವಿಧ ಪ್ರಮುಖರಾದ ಸೀತಾನದಿ ರಮೇಶ ಹೆಗ್ಡೆ, ಹೆಬ್ರಿ ಶೀನ ಪೂಜಾರಿ, ಹೆಬ್ರಿ ವಾದಿರಾಜ ಶೆಟ್ಟಿ, ಕಾರ್ಕಳ ಸುಧಾಕರ ಕೋಟ್ಯಾನ್, ಜಾರ್ಜ್ ಕ್ಯಾಸ್ಟಲಿನೋ ನಕ್ರೆ, ಎಳ್ಳಾರೆ ರಾಘವ ದೇವಾಡಿಗ,ಕಾರ್ಕಳ ಭಾನು ಭಾಸ್ಕರ್, ಗೋಪಾಲ ಭಂಡಾರಿ ಅವರ ಸಹೋದರ ರಾಜೇಶ ಭಂಡಾರಿ, ಪುತ್ರ ಪ್ರದೀಪ್ ಭಂಡಾರಿ ಭಾಗವಹಿಸಿದ್ದರು. ಎಚ್. ಜನಾರ್ಧನ್ ನಿರೂಪಿಸಿದರು. ನವೀನ್ ಕೆ. ಅಡ್ಯಂತಾಯ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.